Sat. Nov 2nd, 2024

ಕರ್ನಾಟಕಕ್ಕೆ ಮತ್ತೆರಡು ವಂದೇ ಭಾರತ್ ರೈಲುಗಳು

Vande Bharat Express
Share this with Friends

ಅಹಮದಾಬಾದ್ : ಕಲ್ಯಾಣ ಕರ್ನಾಟಕ ಭಾಗ ಒಳಗೊಂಡಂತೆ ಕರ್ನಾಟಕವು ಎರಡು ಹೊಸ ವಂದೇ ಭಾರತ್ ರೈಲುಗಳನ್ನು ಪಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಗುಜರಾತ್​​​ನ ಅಹಮದಾಬಾದ್‌ನಲ್ಲಿ ಒಂದೇ ಬಾರಿಗೆ 10 ಹೊಸ ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಎರಡು ಹೊಸ ರೈಲುಗಳು – ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ (ರೈಲು ಸಂಖ್ಯೆ: 22231/22232) ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಎಸ್‌ಎಂವಿಟಿ ಬೆಂಗಳೂರು ಮತ್ತು ಕೃಷ್ಣರಾಜಪುರದ ಮೂಲಕ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಹೆಚ್ಚುವರಿ ವಂದೇ ಭಾರತ್ ರೈಲು – ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಎರಡು ಸೇರ್ಪಡೆಗಳೊಂದಿಗೆ ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ವರ್ಚ್ಯುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಮಾರ್ಗಗಳಾದ ಲಕ್ಷ್ಮೀ-ಡೆಹ್ರಾಡೂನ್ ವಂದೇ ಭಾರತ್ ಜೊತೆಗೆ ಪಾಟ್ನಾ-ಲಕ್ಷ್ಮೀ, ನ್ಯೂ ಜಗುರಿ-ಪಾಟ್ನಾ, ಪುರಿ- ವಿಶಾಖಪಟ್ಟಣಂ, ಕಲಬುರಗಿ-ಬೆಂಗಳೂರು, 5023- ವಾರಣಾಸಿ, ಮತ್ತು ಖಜುರಾಹೊ-ದೆಹಲಿ, ಅಹಮದಾಬಾದ್-ಮುಂಬೈ, ಸಿಕಂದರಾಬಾದ್- ವಿಶಾಖಪಟ್ಟಣಂ ಮತ್ತು ಮೈಸೂರು-ಚೆನ್ನೈ ಮಾರ್ಗಗಳ ರೈಲುಗಳಿಗೆ ಚಾಲನೆ ನೀಡಿದ್ದಾರೆ.

ಪ್ರತಿ ದಿನದ ರೈಲು ಸಂಚಾರ (ಬುಧವಾರ ಹೊರತುಪಡಿಸಿ) ಏಪ್ರಿಲ್ ಐದರಿಂದ ಆರಂಭವಾಗಲಿದೆ. ಈ ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್ ಹಿಂದಿನ ಬಿಳಿ ಮತ್ತು ನೀಲಿ ಬಣ್ಣಕ್ಕಿಂತ ಭಿನ್ನವಾಗಿ ಕಿತ್ತಳೆ ಮತ್ತು ಬಿಳಿ ಬಣ್ಣಗಳಲ್ಲಿ ಇರಲಿದೆ. 2022ರ ನವೆಂಬರ್‌ನಲ್ಲಿ, ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ಮಧ್ಯೆ ಸಂಚರಿಸುವ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದೀಗ ಮತ್ತೊಂದು ರೈಲಿಗೆ ಚಾಲನೆ ನೀಡಿದ್ದಾರೆ.


Share this with Friends

Related Post