Mon. Dec 23rd, 2024

ಸುಸ್ಥಿರ ನಗರಗಳ ನಿರ್ಮಾಣಕ್ಕೆ ಒಡಂಬಡಿಕೆ

Share this with Friends

ಬೆಂಗಳೂರು,ಮಾ.12: ಸುಸ್ಥಿರ ನಗರಗಳ ನಿರ್ಮಾಣಕ್ಕೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕ್ಲೈಮೇಟ್‌ ರೈಸ್‌ ಅಲಯನ್ಸ್‌ ಒಡಂಬಡಿಕೆ ಮಾಡಿಕೊಂಡಿವೆ.

ರಾಜ್ಯದ ನಗರಗಳನ್ನ ಹವಾಮಾನ ವೈಪರಿತ್ಯಗಳಿಂದಾಗುವ ಚೇತರಿಕೆಗೆ ಸಜ್ಜುಗೊಳಿಸಿ ಸುಸ್ಥಿರ ನಗರಗಳಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕ್ಲೈಮೇಟ್‌ ರೈಸ್‌ ಅಲಯನ್ಸ್‌,ಜನ ಅರ್ಬನ್ ಸ್ಪೇಸ್ ಫೌಂಡೇಶನ್,ಡಬ್ಲ್ಯೂ ಆರ್‌ ಐ, ಜನಾಗ್ರಹ, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್, ಮತ್ತು ದಿ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ.ಎಂ.ವಿ. ರಾಜೀವ್ ಗೌಡ ಹೇಳಿದರು.

ವಿಕಾಸಸೌಧದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಸ್ಥಿರ ಮತ್ತು ಹವಾಮಾನ-ನಿರೋಧಕ ನಗರಗಳ ನಿರ್ಮಾಣದ ಮೇಲೆ ಕೇಂದ್ರೀಕರಿಸಿದ ಕಾರ್ಯಸೂಚಿಯನ್ನು ಅನಾವರಣಗೊಳಿಸಿದ್ದೇವೆ ಎಂದು ತಿಳಿಸಿದರು

ಕರ್ನಾಟಕದ ನಗರಗಳು ಹವಾಮಾನ ವೈಪರೀತ್ಯಗಳಿಂದ ಚೇತರಿಸಿಕೊಳ್ಳುವಂತೆ ಅಭಿವೃದ್ದಿಗೊಳಿಸಲು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಬದ್ಧವಾಗಿದೆ,
ಕ್ಲೈಮೇಟ್‌ ರೈಸ್‌ ಅಲಯನ್ಸ್‌ ನೊಂದಿಗಿನ ನಮ್ಮ ಸಹಯೋಗ ಮತ್ತು ಅವರ ಜ್ಞಾನ, ಸಂಶೋಧನೆ, ವಿಶ್ಲೇಷಣೆ ಮತ್ತು ಆಳವಾದ ಅನುಭವ ನಮ್ಮ ನಗರ ಪರಿಸರವನ್ನು ರಕ್ಷಿಸುವ ಮತ್ತು ನಮ್ಮ ಸಮುದಾಯಗಳ ಯೋಗಕ್ಷೇಮವನ್ನು ಹೆಚ್ಚಿಸುವ ಪರಿವರ್ತನೆಗೆ ಸಹಾಯಕವಾಗಲಿದೆ ಎಂದು ಹೇಳಿದರು

ಈ ಸಹಯೋಗದಿಂದ ನಾವು ನಗರಗಳಲ್ಲಿ ನೀರಿನ ಚೇತರಿಕೆಯ ಯೋಜನೆಗಳ ಮೂಲಕ ಸಮಗ್ರ ನೀರಿನ ನಿರ್ವಹಣೆಯನ್ನು ಅಭಿವೃದ್ದಿಪಡಿಸಲಿದ್ದೇವೆ. ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವುದು, ನಗರ ಉಷ್ಣತೆ ಹಾಗೂ ಪ್ರವಾಹದ ಚೇತರಿಕೆಗೆ ಅಗತ್ಯವಿರುವ ಯೋಜನೆಗಳನ್ನ ರೂಪಿಸುವುದು, ಕಡಿಮೆ ಇಂಗಾಲವನ್ನು ಹೊರಸೂಸುವ ನಗರಗಳ ಅಭಿವೃದ್ದಿಗೊಳಿಸುವುದು ಮುಖ್ಯ ಗುರಿ ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸೆಲ್‌ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.


Share this with Friends

Related Post