Mon. Dec 23rd, 2024

ಅಶ್ವಮೇಧ ವಿಶೇಷ ಬಸ್ ಲೋಕಾರ್ಪಣೆ:ಹಸಿರು ನಿಶಾನೆ ತೋರಿದ ಸಿಎಂ

Share this with Friends

ಬೆಂಗಳೂರು,ಫೆ.5: ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್ ಪ್ರೆಸ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು.

ಶಕ್ತಿ ಯೋಜನೆಯ ಒತ್ತಡ ಕಡಿಮೆಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುಮಾರು 800 ಹೊಸ ಬಸ್ ಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಮೇ 24ರೊಳಗೆ 800 ಅಶ್ವಮೇಧ ಬಸ್ ಗಳು ಕೆ.ಎಸ್.ಆರ್.ಟಿ.ಸಿ. ಡಿಪೋ ಸೇರಲಿವೆ. ಈ ಬಸ್ ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಇರಲಿದೆ. ಬೇಡಿಕೆ ಇರುವ ಕಡೆ ನೂರು ಬಸ್ ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಈ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಅಶ್ವಮೇಧ ಬಸ್ ಗಳು 3.42 ಮೀಟರ್ ಎತ್ತರ ಇದೆ. ಒಟ್ಟು 52 ಆಸನಗಳು ಇರುವ ಈ ಬಸ್ ಗಳು ಬಕೆಟ್ ರೀತಿಯ ವಿನ್ಯಾಸವನ್ನು ಹೊಂದಿದೆ.

ಪ್ರಯಾಣದ ಮರು ಕಲ್ಪನೆ ಎಂಬ‌ ಘೋಷ ವಾಕ್ಯದೊಂದಿಗೆ ಈ ಬಸ್ ಗಳನ್ನು ಪರಿಚಯ ಮಾಡಲಾಗಿದೆ. ಈ ಬಸ್ ಗಳ ಮುಂದಿನ ಮತ್ತು ಹಿಂದಿನ ಗಾಜುಗಳು ವಿಶಾಲವಾಗಿದೆ ನೋಡಲು ಸುಂದರವಾಗಿದೆ

ಕಿಟಕಿ ಪ್ರೇಮ್ ಹಾಗೂ ಗಾಜು ದೊಡ್ಡಾಗಿದ್ದು, ಟಿಂಟೆಡ್ ಗಾಜುಗಳನ್ನು ಹೊಂದಿದೆ. ಬಸ್ ನಲ್ಲಿ ಸ್ಥಳ ಟ್ರ್ಯಾಕರ್, ಪ್ಯಾನಿಕ್ ಬಟನ್ ಹಾಗೂ ಬಸ್ ಒಳಗಿನ ಮುಂಭಾಗದಲ್ಲಿ ಎಲ್ ಇಡಿ ಫಲಕ ಇದೆ.

ಲಗೇಜ್ ಕ್ಯಾರಿಯರ್ ಗಳನ್ನು ವಿನೂತನವಾಗಿ ವಿನ್ಯಾಸ ಮಾಡಿರುವುದು ವಿಶೇಷವಾಗಿದೆ.

ಅಶ್ವಮೇಧ ಬಸ್ ಲೋಕಾರ್ಪಣೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸಾಥ್ ನೀಡಿದರು.

ಈ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.


Share this with Friends

Related Post