Wed. Dec 25th, 2024

ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರಿಗೆ ಬ್ರಾಹ್ಮಣ ಸಂಘಟನೆಯಿಂದ ಅಭಿನಂದನೆ

Share this with Friends

ಮೈಸೂರು,ಮಾ.13: ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರಿಗೆ ಬ್ರಾಹ್ಮಣ ಸಂಘಟನೆಯಿಂದ ಅಭಿನಂದನೆ‌ ಸಲ್ಲಿಸಲಾಯಿತು.

ಮೈಸೂರು ವಿಶ್ವವಿದ್ಯಾಲಯದ 104 ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಗೆ ಭಾಜನರಾದ ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಈ ವೇಳೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಅವರು ಅಭಿನಂದಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘಟನೆಯ ಮುಖಂಡರಾದ ಎಂ. ಆರ್ ಬಾಲಕೃಷ್ಣ, ಅಪೂರ್ವ ಸುರೇಶ್, ಯೋಗ ನರಸಿಂಹ (ಮುರಳಿ), ಕಡಕೋಳ ಜಗದೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಹೊಯ್ಸಳ ಕರ್ನಾಟಕದ ನಿರ್ದೇಶಕ ರಂಗನಾಥ್, ಜ್ಯೋತಿ, ದಯಾನಂದ್ ಮತ್ತಿತರರು ಶುಭ ಹಾರೈಸಿದರು.


Share this with Friends

Related Post