Wed. Dec 25th, 2024

ಆಧಾರ್‌ಕಾರ್ಡ್ ಉಚಿತ ಪರಿಷ್ಕರಣೆ ಅವಧಿ ವಿಸ್ತರಣೆ

Share this with Friends

ನವದೆಹಲಿ,ಮಾ13: ನಿಮ್ಮ ಆಧಾರ್‌ಕಾರ್ಡ್
ಇನ್ನೂ ಪರೀಕ್ಷರಣೆ ಆಗಿಲ್ಲವೆ,ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ.

ಆಧಾರ್‌ಕಾರ್ಡ್ ಉಚಿತ ಪರಿಷ್ಕರಣೆಗೆ
ಇದ್ದ ಅವಧಿಯನ್ನು ರಾಷ್ಟ್ರೀಯ ಗುರುತು ಚೀಟಿ ಪ್ರಾಧಿಕಾರವು ಜೂನ್ 14 ರವರೆಗೆ ವಿಸ್ತರಿಸಿದೆ.

ಆಧಾರ್ ಪ್ರಾಧಿಕಾರದ ಈ ಹೊಸ ಆದೇಶ ಹೊರಡಿಸಿರುವುದರಿಂದ ದೇಶಾದ್ಯಂತ ಬಹಳಷ್ಟು ಮಂದಿಗೆ ಉಪಯೋಗವಾಗಲಿದೆ.

ಮೈಆಧಾರ್‌ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾ‌ರ್ ಪರಿಷ್ಕರಣೆ ಮಾಡಿಕೊಳ್ಳಲು ಈ ಹಿಂದೆ ಡಿಸೆಂಬರ್ 14 ಅನ್ನು ಕೊನೆ ದಿನ ನಿಗದಿ ಮಾಡಲಾಗಿತ್ತು.

ನಂತರ ಶುಲ್ಕ ಸಹಿತ ಪರಿಷ್ಕರಣೆಗೆ ಅವಕಾಶವಿತ್ತು. ಇನ್ನೇನು ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಲಿದೆ, ಇದೀಗ ಉಚಿತ ಪರಿಷ್ಕರಣೆ ಅವಧಿಯನ್ನು ಜೂ.14 ರವರೆಗೆ ವಿಸ್ತರಿಸಿದ್ದು,ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವರುತ್ತದೆ.ಆಧಾರ್ ಕಚೇರಿಗಳಿಗೆ ನವೀಕರಣಕ್ಕೆ ಹೋದರೆ ನಿಗದಿತ ಶುಲ್ಕ ಪಾವತಿಸಲೇಬೇಕಾಗುತ್ತದೆ.


Share this with Friends

Related Post