ಮೈಸೂರು, ಮಾ.14: ಮೈಸೂರು, ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆಯನ್ನು ಅಪೂರ್ವ ಸ್ನೇಹ ಬಳಗ ಸ್ವಾಗತಿಸಿದೆ.
ಇಂದು ಅಪೂರ್ವ ಸ್ನೇಹ ಬಳಗದ ವತಿಯಿಂದ ನಗರದ ಅರಮನೆ ಮುಂಭಾಗ ನಾಡಿನ ದೊರೆ ಮಹಾರಾಜರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿ ಪ್ರವಾಸಿಗರಿಗೆ ಮೈಸೂರು ಪಾಕ್ ವಿತರಿಸಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಪಕ್ಷದ ವರಿಷ್ಠರು ಮೈಸೂರು ರಾಜ ವಂಶಸ್ಥ ಯದುವೀರ ಒಡೆಯರ್ ಅವರಿಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಪ್ರತಾಪ್ ಸಿಂಹ ಕೂಡ ಯದುವೀರ್ ರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದು ಸ್ವಾಗತಾರ್ಹ, ಇದನ್ನೇ ಸ್ಫೂರ್ತಿಯಾಗಿಸಿಕೊಂಡು ಎಲ್ಲಾ ಸಮಾನಮನಸ್ಕರು ಹಾಗೂ ಪಕ್ಷದ ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ದೇಶದ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕು, ನಾವೆಲ್ಲರೂ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರವನ್ನು ಪ್ರತಿಯೊಬ್ಬರಿಗೂ ತಲುಪಿಸುತ್ತೇವೆ, ಪ್ರತಾಪ್ ಸಿಂಹ ಅವರು ಮುಂದೆ ಖಂಡಿತ ಉತ್ತಮ ಸ್ಥಾನ ಪಡೆಯುತ್ತಾರೆ, ಕಳೆದ 10 ವರ್ಷದಲ್ಲಿ ಅವರು ಉತ್ತಮ ಕಾರ್ಯ ಯೋಜನೆ ಜಾರಿ ಮಾಡಿದ್ದಾರೆ, ಅದನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಯದುವೀರ್ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಈ ವೇಳೆ ದಯಾನಂದ, ಸುಚಿಂದ್ರ, ಮಿರ್ಲೆ ಪನೀಶ್, ನಾಗಶ್ರೀ, ಚಕ್ರಪಾಣಿ, ಅಕ್ಷಯ್ ಅರಸ್, ಭರತ್, ಕೆಂಗೇಗೌಡ, ನವೀನ್ , ನಾರಾಯಣ, ಕಾರ್ತಿಕ್, ಅಕುಲ್ ಬಾಷಾ, ನಾಗರಾಜ್, ಪುರುಷೋತ್ತಮ್, ವ್ಯಾಪಾರಸ್ಥರು ಮತ್ತಿರರು ಹಾಜರಿದ್ದರು.