ಲೋಕಸಭಾ ಚುನಾವಣೆಗೆ ನಾಳೆ ದಿನಾಂಕ ಘೋಷಣೆ
ನವದೆಹಲಿ,ಮಾ.15: ಭಾರಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ನಾಳೆ ದಿನಾಂಕ ಘೋಷಣೆಯಾಗಲಿದೆ.
ಮಾರ್ಚ್ 16 ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆ ದಿನಾಂಕ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.
2024 ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯ ವಿಧಾನಸಭೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗ ಸಿದ್ದವಾಗಿದೆ.
ಕಳೆದ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆದಿತ್ತು, ಈ ಬಾರಿ ಎಷ್ಟು ಹಂತದಲ್ಲಿ ಚುನಾವಣೆ ನಡೆಯಲಿದೆ, ಯಾವ ದಿನಗಳಂದು ಎಂಬುದು ನಾಳೆ ಗೊತ್ತಾಗಲಿದೆ.