ಮೈಸೂರು, ಮಾ.16: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಕಾವೇರಿ ನೀರಾವರಿ ನಿಗಮದ ಕಚೇರಿಯನ್ನು ಬಂದ್ ಮಾಡಿಸಿ ಪ್ರತಿಭಟಿಸಿದರು.
ಮೈಸೂರಿನ ಕೆ ಆರ್ ಎಸ್ ರಸ್ತೆಯಲ್ಲಿರುವ, ಕಾವೇರಿ ನೀರಾವರಿ ನಿಗಮ ಇಲಾಖೆ ಕಚೇರಿಯನ್ನು ಬಂದ್ ಮಾಡಿಸಿ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯ ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಜಮಾಯಿಸಿದ ಕಾವೇರಿ ಕ್ರಿಯಾಸಮಿತಿ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು,ನಮ್ಮ ರಾಜ್ಯದಲ್ಲಿ ಈಗಾಗಲೇ ಭೀಕರ ಬರ ತಾಂಡವವಾಡುತ್ತಿದೆ, ನಮ್ಮಲ್ಲಿ ಕುಡಿಯಲೇ ನೀರಿಲ್ಲ, ಇಂಥ ಸಮಯದಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ಈ ಕೂಡಲೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ,ಕಾರ್ಯದರ್ಶಿ ತೇಜೇಶ್ ಲೋಕೇಶ್ ಗೌಡ, ಆಟೋ ಮಹದೇವು, ಹನುಮಂತೇಗೌಡ, ನಾಗರಾಜ್, ಪ್ರಭುಶಂಕರ್, ಹನುಮಂತಯ್ಯ, ನೇಹಾ, ಮಂಜುಳಾ, ಭಾಗ್ಯಮ್ಮ, ಸಿಂದುವಳ್ಳಿ ಶಿವಕುಮಾರ್, ಪುಷ್ಪವತಿ , ರವೀಶ್, ರಘು, ವಿಷ್ಣು, ಪ್ರಭಾಕರ, ಪ್ರಮೋದ್, ವರಕೂಡು ಕೃಷ್ಣೇಗೌಡ, ಬಸವರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.