ಶಿವಮೊಗ್ಗ: ಯಡಿಯೂರಪ್ಪಗೆ ಪಕ್ಷದ ಸಂಘಟನೆ ಬೇಕಿಲ್ಲ, ತನ್ನ ಮಕ್ಕಳು ಉದ್ಧಾರವಾದರೆ ಸಾಕು ಎಂದು ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ತಮ್ಮ ದಾಳಿ ಮುಂದುವರಿಸಿದರು.
ರಾಜ್ಯದಲ್ಲಿ ಬಿಜೆಪಿ ಸಂಘಟನೆ ಹಾಳಾಗುತ್ತಿದೆ, ಪಕ್ಷ ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕು ನಲುಗಿತ್ತಿದೆಎಂದರು. ಇದೇ ಸಂದರ್ಭದಲ್ಲಿ ಅವರು ಲಿಂಗಾಯತ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಒಕ್ಕಲಿಗ ಧುರೀಣ ಸಿಟಿ ರವಿ ಪರ ಬ್ಯಾಟ್ ಬೀಸಿದರು. ಅವರಿಬ್ಬರು ಪಕ್ಷಕ್ಕಾಗಿ ಹಲವಾರು ಬಲಿದಾನಗಳನ್ನು ಮಾಡಿದ್ದಾರೆ ಮತ್ತು ರಾಜ್ಯದ ಪ್ರಮುಖ ಮತ್ತು ಬಲಾಢ್ಯ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ,
ಅವರಲ್ಲೊಬ್ಬರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಯಾಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ ಈಶ್ವರಪ್ಪ ಹಿಂದುಳಿದ ವರ್ಗಗಳ ಬೆಂಬಲ ಪಡೆಯುವ ಉದ್ದೇಶವಿದ್ದಿದ್ದರೆ ತನ್ನನ್ನು ಮಾಡಬಹುದಿತ್ತು ಎಂದು ಹೇಳಿದರು. ರಾಜ್ಯಾದಾದ್ಯಂತ ಇರುವ ತಮ್ಮ ಬೆಂಬಲಿಗರು ತಮ್ಮನ್ನು ಪಕ್ಷೇತ್ರರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ, ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದರೆ ತಾನು ಖಂಡಿತ ಗೆಲ್ಲುವುದಾಗಿ ಅವರು ಹೇಳಿದರು.