ಮೈಸೂರು,ಮಾ.16: ದೇಶದಲ್ಲಿ ಶಾಂತಿ ನೆಲೆಸಲಿ ಹಾಗೂ ಮಳೆ, ಬೆಳೆ ಚೆನ್ನಾಗಿ ಆಗಿ ರೈತರು ಸುಖ ಶಾಂತಿಯಿಂದ ಬಾಳುವಂತಾಗಲಿ ಎಂದು ಕೆ ಹರೀಶ್ ಗೌಡ ಹಾರೈಸಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆ, ಸುಬ್ಬರಾಯನಕೆರೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಂದು ಹಮ್ಮಿಕೊಂಡಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 429ನೇ ವರ್ದಂತಿ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಯರು ಜಾತ್ಯತೀತ, ಭಾಷಾತೀತ, ಪ್ರಾಂತ್ಯಾತೀತರಾಗಿ ಭಕ್ತರನ್ನು ಆಶೀರ್ವದಿಸುತ್ತಿದ್ದಾರೆ, ಮನುಕುಲ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ,ಎಲ್ಲ ಮಾನಸ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದು ಹೇಳಿದರು.
ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಗುರುಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಮುಖರು. ವಿರಳಾತಿವಿರಳಾದ ಗುರುಗಳಲ್ಲಿ ಗುರುತ್ವವಿದೆ ಎಂದು ಬಣ್ಣಿಸಿದರು.
ಶ್ರೀ ಸುಶಮೀoದ್ರ ತೀರ್ಥರ ಸೇವಾ ಸಂಘ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 429ನೇ ವರ್ದಂತಿ ಅಂಗವಾಗಿ ಭಕ್ತಾದಿಗಳಿಗೆ ಲಾಡು ಹಾಗೂ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಮಾಜಿ ಮೂಡ ಸದಸ್ಯರಾದ ನವೀನ್ ಕುಮಾರ್,ಶ್ರೀ ಸುಶಮೀoದ್ರ ತೀರ್ಥರ ಸೇವಾ ಸಂಘದ ಅಧ್ಯಕ್ಷ ಡ್ರೈ ಗೋಬಿ ನಾಗರಾಜ್, ಉಪಾಧ್ಯಕ್ಷ ವರುಣ ಮಹದೇವ್, ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ್ ಕೊಪ್ಪಲು, ಡೆಲ್ಲಿರವಿ,ಸಮಾಜ ಸೇವಕರಾದ ವಿದ್ಯಾ, ರವಿಚಂದ್ರ, ನಾಗಶ್ರೀ, ಮಂಜುನಾಥ್, ಬೈರತಿ ಲಿಂಗರಾಜು, ನವೀನ್ ಮತ್ತಿತರರು ಹಾಜರಿದ್ದರು.