Mon. Dec 23rd, 2024

ಜೈನ ತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ವಂಚನೆ

Share this with Friends

ಮೈಸೂರು,ಮಾ16: ಜೈನ ತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ಮಧ್ಯಪ್ರದೇಶದ ವ್ಯಾಪಾರಿ ಮೈಸೂರಿನ ಶಾಂತಿನಾಥ ಸೇವಾ ಸಮಿತಿಯವರನ್ನು ವಂಚಿಸಿದ‌ ಘಟನೆ ನಡೆದಿದೆ.

ಜೈನ ತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ಮಧ್ಯಪ್ರದೇಶ, ಜಬಲ್ ಪುರದ ಮಾರ್ಬಲ್ ವ್ಯಾಪಾರಿ ಮೈಸೂರಿನ ಶಾಂತಿನಾಥ ಸೇವಾ ಸಮಿತಿ ಪದಾಧಿಕಾರಿಗಳನ್ನ ವಂಚಿಸಿದ್ದಾನೆ

ವ್ಯಾಪಾರಿಯ ಮಾತು ನಂಬಿ ಪದಾಧಿಕಾರಿಗಳು 3.31 ಲಕ್ಷ ಹಣ ಕೊಟ್ಟು ವಂಚನೆಗೆ ಒಳಗಾಗಿದ್ದಾರೆ.

ಮಧ್ಯಪ್ರದೇಶದ ಜಬಲ್ ಪುರದ ಮಹಾವೀರ್ ಮಾರ್ಬಲ್ ಮತ್ತು ಮೂರ್ತಿ ಆರ್ಟ್ ನ ಮಾಲೀಕ ವಿಕಾಸ್ ಜೈನ್ ಎಂಬಾತನ ವಿರುದ್ದ ವಂಚನೆ ಕೆ.ಆರ್. ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಶಾಂತಿನಾಥ ಸೇವಾ ಸಮಿತಿಯವರು ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಕೋಟಿ ಶ್ರೀಶಾಂತಿನಾಥ ಬಸದಿಯಲ್ಲಿ ಜೈನ ತೀರ್ಥಂಕರ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ನಡೆದ ಚಾತುರ್ಮಾಸ ಪೂಜೆ ವೇಳೆ ಜೈನ ಮುನಿಗಳ ಕಾರ್ಯಕ್ರಮಕ್ಕೆ ಜಬಲ್ ಪುರದಿಂದ ಬಂದಿದ್ದ ವಿಕಾಸ್ ಜೈನ್ ಶಾಂತಿನಾಥ ಸೇವಾ ಸಮಿತಿ ಪದಾಧಿಕಾರಿಗಳನ್ನ ಭೇಟಿಯಾಗಿ ತಾನು ಮಾರ್ಬಲ್ ವ್ಯಾಪಾರಿ ವಿಗ್ರಹಗಳನ್ನ ಕೆತ್ತನೆ ಮಾಡಿಕೊಡುವುದಾಗಿ ನಂಬಿಸಿದ್ದಾನೆ.

ಈತನ ಮಾತು ನಂಬಿದ ಸಮಿತಿ ಸದಸ್ಯರು 8 ವಿಗ್ರಹಗಳು, ಫ್ರೇಂಗಳು ಹಾಗೂ ಮಾನಸ್ಥಂಭದ ಪೀಠದ ಕಲ್ಲುಗಳನ್ನ 8,61,000 ರೂ ವೆಚ್ಚದಲ್ಲಿ ಮಾಡಿಕೊಡುವುದಾಗಿ ನಂಬಿಸಿದ್ದಾನೆ.

ಮುಂಗಡವಾಗಿ ಪದಾಧಿಕಾರಿಗಳು ವಿಕಾಸ್ ಜೈನ್ ಗೆ 1,11,000 ರೂ. ಪಾವತಿಸಿದ್ದಾರೆ.

ಕೆಲವು ದಿನಗಳ ನಂತರ ವಿಗ್ರಹಗಳು ತಯಾರಾಗುತ್ತಿರುವ ಫೋಟೋಗಳನ್ನ ತೋರಿಸಿ 2,20,000ರೂ. ಪಡೆದಿದ್ದಾನೆ.
ನಂತರ ಸಮಿತಿಯವರ ಕೈಗೆ ಸಿಗದೆ ಕಣ್ಣಾಮುಚ್ಚಾಲೆ ಆಟವಾಡಿದ್ದಾನೆ.
ಸ್ವಿಚ್ ಮಾಡುವುದು, ಸುಳ್ಳು ಕಾರಣಗಳನ್ನ ನೀಡಿ ವಿಗ್ರಹಗಳನ್ನ ನೀಡದೆ ವಂಚಿಸಿದ್ದಾನೆ.

ಇದೀಗ ವಿಕಾಸ್ ಜೈನ್ ವಿರುದ್ದ ಶಾಂತಿನಾಥ ಸೇವಾ ಸಮಿತಿಯ ಖಜಾಂಚಿ ಮಹೇಶ್ ಪ್ರಸಾದ್ ರವರು ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share this with Friends

Related Post