Mon. Dec 23rd, 2024

ಅಣ್ಣನ ಮಗನ ಕೊಲೆ ಯತ್ನ: ಚಿಕ್ಕಪ್ಪ ಸೇರಿ ಐದು‌ ಮಂದಿ ವಿರುದ್ದ ದೂರು ದಾಖಲು

Share this with Friends

ಮೈಸೂರು,ಮಾ.17: ಸಾಲದ ಹಣ ಕೇಳಲು ಮನೆಗೆ ಬಂದ ಅಣ್ಣನ ಮಗನನ್ನ ಚಿಕ್ಕಪ್ಪ ಮತ್ತು ಆತನ ಮನೆಯವರು ಕೊಲೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಬೆಳವಾಡಿಯ ಪ್ರಭಾಕರ್ ಎಂಬುವರನ್ನು ನೀರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಲಾಗಿ.

ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದು,
ಚಿಕ್ಕಪ್ಪ ಹಾಗೂ 5 ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪ ಪ್ರಕರಣ ದಾಖಲಾಗಿದೆ.

ಬೆಳವಾಡಿಯ ಪ್ರಭಾಕರ್ ಎಂಬುವರನ್ನ ಕೊಲೆಗೆ ಯತ್ನಿಸಿದ ಆರೋಪದಡಿ ಚಿಕ್ಕಪ್ಪ ಶ್ರೀನಿವಾಸ,ಪತ್ನಿ ಗೀತಾ,ಮಕ್ಕಳಾದ ಸಂಜು,ರಂಜು ಹಾಗೂ ಗೀತಾ ತಂದೆ ಕೃಷ್ಣಪ್ಪ ಎಂಬುವರ ಮೇಲೆ ಕೊಲೆ ಯತ್ನ ದೂರು ದಾಖಲಾಗಿದೆ.

ಪ್ರಭಾಕರ್ ತಮ್ಮ ಚಿಕ್ಕಪ್ಪ ಶ್ರೀನಿವಾಸ್ ಗೆ 16 ಲಕ್ಷ ಸಾಲ ನೀಡಿದ್ದರು.ಸಾಲ ವಾಪಸು ಮಾಡಲು 13 ಲಕ್ಷದ ಚೆಕ್ ನೀಡಿದ್ದರು,ಅದನ್ನುನಗದೀಕರಿಸಲು
ಬ್ಯಾಂಕ್ ಗೆ ಚೆಕ್ ಹಾಕಿದಾಗ ಬೌನ್ಸ್ ಆಗಿದೆ.ಈ ಬಗ್ಗೆ ಫೋನ್ ಮಾಡಿದಾಗ ಚಿಕ್ಕಪ್ಪ ಮನೆಗೆ ಬರುವಂತೆ ತಿಳಿಸಿದ್ದಾರೆ.

ಅದರಂತೆ ಮನೆಗೆ ಬಂದ ಪ್ರಭಾಕರ್ ಗೆ ಹಣ ನೀಡುವುದಿಲ್ಲವೆಂದು ಚಿಕ್ಕಪ್ಪ ಹೇಳಿದ್ದಾರೆ.ಇದೇ ವೇಳೆ ಪ್ರಭಾಕರ್ ಕುಡಿಯಲು ನೀರು ಕೇಳಿದ್ದಾರೆ.ಗೀತಾ ಅಡುಗೆ ಮನೆಯಿಂದ ನೀರು ತಂದು ಕೊಟ್ಟಿದ್ದಾರೆ.ನೀರು ಕುಡಿಯುತ್ತಿದ್ದಂತೆಯೇ ಪ್ರಭಾಕರ್ ಗೆ ತಲೆ ಸುತ್ತಿದ್ದಂತಾಗಿದೆ.

ಆಗ ಶ್ರೀನಿವಾಸ್,ಸಂಜು,ರಂಜು ಹಾಗೂ ಕೃಷ್ಣಪ್ಪ ಅವರುಗಳು ಪ್ರಭಾಕರ್ ಗೆ ಹಲ್ಲೆ ನಡೆಸಿದ್ದಾರೆ.

ಅಂತೂ ಕಷ್ಟಪಟ್ಟು ಬಿಡಿಸಿಕೊಂಡು ಮನೆಯಿಂದ ಹೊರಬಂದ ಪ್ರಭಾಕರ್ ಸ್ವಲ್ಪದೂರ ಹೋಗಿ ಪ್ರಜ್ಞೆತಪ್ಪಿ ಬಿದ್ದಿದ್ದು,
ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್,ಗೀತಾ,ಸಂಜು,ರಂಜು,ಕೃಷ್ಣಪ್ಪ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post