Mon. Dec 23rd, 2024

ಕರ್ತವ್ಯ ನಿರತ ಯೋಧ ಹೃದಯಾಘಾತದಿಂದ ನಿಧನ

Ramanagowda ChandraGowdar
Share this with Friends

ಗದಗ, ಫೆ. 06: ಕರ್ತವ್ಯ ನಿರತ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಸಿಕ್ಕಿಂನ ಬಾಂಗ್ ಡೋಂಗ್ರೆಯಲ್ಲಿ ನಡೆದಿದೆ. ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರ ಗ್ರಾಮದ ರಾಮನಗೌಡ ಚಂದ್ರಗೌಡರ (40) ಎಂಬವರು ಮೃತಪಟ್ಟ ಯೋಧರಾಗಿದ್ದಾರೆ. ಬಾಂಗ್ ಡೋಂಗ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಹಿಮಪಾತದ ನಡುವೆ ರಕ್ತದೊತ್ತಡ ಏರುಪೇರಾಗಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಬರುವ ಏಪ್ರಿಲ್‍ನಲ್ಲಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಲಿದ್ದರು. ಅಷ್ಟರಲ್ಲೇ ಅವರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಇವರು 2002 ರಲ್ಲಿ ಐಟಿಬಿಪಿಗೆ (ಇಂಡಿಯನ್ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ನೇಮಕವಾಗಿದ್ದರು. ಕಳೆದ 22 ವರ್ಷಗಳಿಂದ ಸೇನೆಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಉತ್ತರಾಖಂಡ, ಅಸ್ಸಾಂ, ಮಿಜೋರಾಂ, ಚಂಡೀಗಢ, ಸಿಕ್ಕಿಂ ಸೇರಿದಂತೆ ಅನೇಕ ಕಡೆಗಳಲ್ಲಿ ಇವರು ಕರ್ತವ್ಯ ನಿರ್ವಹಿಸಿದ್ದಾರೆ. ಫೆ.7 ರಂದು ಯೋಧನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಗ್ರಾಮ ಪಂಚಾಯತ್ ನೇರ ನೇಮಕಾತಿ


Share this with Friends

Related Post