ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಶ್ರೀವಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಹಾಗೂ ಎಂಜಿನಿಯರಿಂಗ್ ಸುಧಾರಣಾ ಕಾಮಗಾರಿಗಳಿಗಾಗಿ ಲೈನ್ ಬ್ಲಾಕ್ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ವಿವಿಧ ದಿನಾಂಕಗಳಲ್ಲಿ ಬೆಂಗಳೂರು, ಮಂಗಳೂರು ಮತ್ತು ಕಾರವಾರ ನಡುವೆ ಸಂಚರಿಸುವ ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದಾಗಿರುವ ರೈಲುಗಳು ಹಾಗೂ ದಿನಾಂಕಗಳ ಪೂರ್ಣ ವಿವರ ಇಲ್ಲಿದೆ:
ಯಶವಂತಪುರ – ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ (16575/16576):
ರೈಲು ಸಂಖ್ಯೆ 16575 (ಯಶವಂತಪುರದಿಂದ): ಅಕ್ಟೋಬರ್ 4, 6, 8, 11, 13, 15, 22, 25, 27, 29 ಮತ್ತು ನವೆಂಬರ್ 1, 3 ರಂದು (ಒಟ್ಟು 12 ದಿನಗಳು) ಸಂಚಾರ ಇರುವುದಿಲ್ಲ.
ರೈಲು ಸಂಖ್ಯೆ 16576 (ಮಂಗಳೂರಿನಿಂದ): ಅಕ್ಟೋಬರ್ 5, 7, 9, 12, 14, 16, 23, 26, 28, 30 ಮತ್ತು ನವೆಂಬರ್ 2, 4 ರಂದು (ಒಟ್ಟು 12 ದಿನಗಳು) ರದ್ದುಗೊಂಡಿದೆ.
ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16515/16516):
ರೈಲು ಸಂಖ್ಯೆ 16515 (ಯಶವಂತಪುರದಿಂದ): ಅಕ್ಟೋಬರ್ 5, 7, 9, 12, 14, 21, 23, 26, 28, 30 ಮತ್ತು ನವೆಂಬರ್ 2 ರಂದು (ಒಟ್ಟು 11 ದಿನಗಳು) ಸೇವೆ ಇರುವುದಿಲ್ಲ.
ರೈಲು ಸಂಖ್ಯೆ 16516 (ಕಾರವಾರದಿಂದ): ಅಕ್ಟೋಬರ್ 6, 8, 10, 13, 15, 22, 24, 27, 29, 31 ಮತ್ತು ನವೆಂಬರ್ 3 ರಂದು (ಒಟ್ಟು 11 ದಿನಗಳು) ರದ್ದಾಗಿದೆ.
ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ (16539/16540):
ರೈಲು ಸಂಖ್ಯೆ 16539 (ಯಶವಂತಪುರದಿಂದ): ಅಕ್ಟೋಬರ್ 10, 24 ಮತ್ತು 31 ರಂದು (ಒಟ್ಟು 3 ದಿನಗಳು) ಸಂಚಾರ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16540 (ಮಂಗಳೂರಿನಿಂದ): ಅಕ್ಟೋಬರ್ 11, 25 ಮತ್ತು ನವೆಂಬರ್ 1 ರಂದು (ಒಟ್ಟು 3 ದಿನಗಳು) ಸಂಚರಿಸುವುದಿಲ್ಲ.
ಹಬ್ಬದ ದಿನಗಳ ಸನಿಹದಲ್ಲೇ ಈ ರೈಲುಗಳ ಸಂಚಾರ ರದ್ದಾಗಿರುವುದರಿಂದ ಕರಾವಳಿ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಕೋರಿದೆ.

