Wed. Aug 26th, 2026

20 ವರ್ಷದಿಂದ ತಲೆ ಮರಿಸಿಕೊಂಡ ಆರೋಪಿಯನ್ನು ಬಂಧಿಸಿದ ಕಾಗವಾಡ‌ ಪೊಲೀಸರು

Share this with Friends

ವರದಿ: ವಿಕಿಲ‌ ಎಸ್.ಹಿರೇಮಠ

ಕಾಗವಾಡ: ಹನ್ನೊಂದು‌‌ ಕಳ್ಳತನ ಪ್ರಕರಣದಲ್ಲಿ‌ ಭಾಗಿಯಾಗಿ 20 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ್ದೇ ತಲೆ‌ಮರಿಸಿಕೊಂಡಿದ್ದ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಕಾಗವಾಡ ಪೊಲೀಸರು ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.

ಸಾಗರ ಮಹಾದೇವ ಪೋಕಳೆ ಬಂಧಿತ ಆರೋಪಿಯಾಗಿದ್ದು ಸದರಿ ಆರೋಪಿಯನ್ನು ಮಹಾರಾಷ್ಟ್ರದ ಸತಾರ ಜಿಲ್ಲೆಯ ಜೈತಾಪುರ ಪಟ್ಟಣದಲ್ಲಿ ವಾಸಿಸುತ್ತಿದ್ದ ಎಂಬ ಖಚಿತ ಮಾಹಿತಿ ಆಧರಿಸಿ ಬೆಳಗಾವಿ ಎಸ್ಪಿ ಕೆ. ರಾಮರಾಜನ,‌ಹೆಚ್ಚುವರಿ ಎಸ್ಪಿ ಆರ್. ಬಿ‌. ಬಸರಗಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ ನೇತೃತ್ವದಲ್ಲಿ ಆರೋಪಿಯನ್ನು ಅತ್ಯಾಧುನಿಕ ತಂತ್ರಾಂಶ ಸಹಾಯದಿಂದ ಬಂಧಿಸಿ‌ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಸದರಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದ ಅಪರಾಧ ವಿಭಾಗದ ಸಿಪಿಸಿ ಮುರಗೇಶ ಜಂಬಗಿ, ರಾಜು ಧುಮಾಳೆ, ಎಸ್. ಬಿ ಮಗದುಮ್ಮ, ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಅವರಿಗೆ ಬೆಳಗಾವಿ ಎಸ್ಪಿ ಕೆ. ರಾಮರಾಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ‌.


Share this with Friends

Related Post