Thu. Aug 27th, 2026

ಪೈಗಂಬರ ದಿನಾಚರಣೆ ನಿಮಿತ್ತ ದೇವರಿಗೆ ಗಲೀಫ್ ಅರ್ಪಣೆ

Share this with Friends

ವರದಿ: ವಿಕಿಲ‌ ಎಸ್. ಹಿರೇಮಠ

ಕಾಗವಾಡ: ಉಗಾರ ಖುರ್ದ ಪಟ್ಟಣದಲ್ಲಿ ಈದ್ ಮಿಲಾದ ಹಬ್ಬದ ಪ್ರಯುಕ್ತ‌ ಗಾಂಧಿಚೌಕ ದರ್ಗಾದಲ್ಲಿರುವ ಮೆಬೂಬ ಉಸ್ತಾನಿ ದರ್ಗಾಕ್ಕೆ ಮುಸ್ಲಿಂ ಯುವಕರಿಂದ ಗಲೀಫ್ ದೇವರಿಗೆ ಅರ್ಪಿಸಲಾಯಿತು.

ಈ ಸಮಯದಲ್ಲಿ ಮಾತನಾಡಿದ ಜಮೀರ ಶೇಖ್ ಇವತ್ತಿನ ದಿನ ಮೊಹಮ್ಮದ್ ಪೈಗಂಬರ್ ಅವರ 1501 ನೇ‌ ಜನ್ಮ ದಿನಾಚರಣೆಯ ಹಬ್ಬದ ಸಂಭ್ರಮವಾದ ಹಿನ್ನಲೆಯಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ನಾಡಿನ‌ ಜನೆತೆಗೆ ಆಯುಷ್ಯ ಆರೋಗ್ಯ ಸಕಲವನ್ನು ಕೊಟ್ಟು ಪೈಗಂಬರ್ ಅವರು ಆಶಿರ್ವಾದವಿರಲಿ‌ ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದರು‌.

ಈ ಸಮಯದಲ್ಲಿ ಇಸಮೈಲ್ ಲಾಂಡಗೆ ಮೈನೂದ್ದೀನ್ ನಂದಿವಾಲೆ,ತೋಹಿದ ಲಾಂಡಗೆ, ತೌಶೀಫ್ ಮೈಶಾಳೆ, ಮುಜಮಿಲ್ಲ್ ಸನದಿ, ಜಮೀರ್ ಮುಜಾವರ,ಮುಜಮ್ಮಿಲ್ ಸನದಿ,ಮಹಮ್ದದ್ ಮೋಮಿನ್,ಬಾಬುಜಾನ ನದಾಫ

ಪ್ರಜ್ವಲ್ ಅಸೂದೆ,ಸದ್ದಾಂ ಕಲಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share this with Friends

Related Post