ಮೈಸೂರು,ಮಾ.20: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾ. ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಅವರು ಕಾಗಿನೆಲೆ ಕನಕ ಗುರುಪೀಠದ ಮೈಸೂರು ಶಾಖಾ ಅಧ್ಯಕ್ಷರಾದ ಶ್ರೀ ಶಿವಾನಂದ ಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಸಿದ್ದರ್ಥನಗರದ ಶಾಖಾ ಮಠಕ್ಕೆ ಭೇಟಿ ನೀಡಿದ ಇಬ್ಬರು ಅಭ್ಯರ್ಥಿಗಳು ಶ್ರೀಗಳಿಗೆ ಫಲ ತಾಂಬೂಲ ನೀಡಿ ಆಶೀರ್ವಾದ ಪಡೆದುಕೊಂಡರು.
ಇದೆ ವೇಳೆ ಮಾತನಾಡಿದ ಶ್ರೀಗಳು, ಉಭಯ ಅಭ್ಯರ್ಥಿಗಳು ಮಠಕ್ಕೆ ಬಂದು ಆಶಿರ್ವಾದ ಪಡೆದಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಕಲೆ, ಸಂಸ್ಕೃತಿ, ಧರ್ಮ, ಸಂಸ್ಕಾರ ಉಳಿಯುವಲ್ಲಿ ಮಹಾರಾಜರ ಪಾತ್ರ ಮಹತ್ವದ್ದು. ಯುವಕರಾದ ಯಧುವೀರ, ಹಾಗೂ ಬಾಲರಾಜ್ ಅವರು ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡಲಿ, ಈ ಅವಿಭಜಿತ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸಲಿ. ಮೋದಿಯವರು ದೇಶದ ಅಭಿೃದ್ಧಿಗಾಗಿ ಶ್ರಮಿಸುತ್ತಿದ್ದು, ಅವರ ಜತೆ ನೀವು ಕೈ ಜೋಡಿಸಿ ಎಂದು ಶುಭ ಹಾರೈಸಿದರು.
ಅಭ್ಯರ್ಥಿ ಯಧುವೀರ ಅವರು ಮಾತನಾಡಿ, ನಮ್ಮ ಸಂಸ್ಥಾನಕ್ಕು ಶ್ರೀಗಳ ಮಠಕ್ಕೂ ಅಭಿನಾಭಾವ ಸಂಬಂಧ ಇದೆ. ಶ್ರೀಗಳು ತುಂಬು ಮನಸ್ಸಿನಿಂದ ಹರಿಸಿದ್ದಾರೆ. ಕುರುಬ ಸಮಾಜ ಹಾಗೂ ಮಠದ ಏಳಿಗೆಗಾಗಿ ಶ್ರಮಿಸುತ್ತೇನೆ. ನಮ್ಮ ಪೂರ್ವಜರು ಮಾಡಿರುವ ಕಾರ್ಯ ಮುಂದುವರಿಸುವ ಕೆಲಸಕ್ಕೆ ಕಂಕಣ ಬದ್ದನಾಗಿರುತ್ತೇನೆ ಎಂದು ಹೇಳಿದರು.
ಇದೆ ವೇಳೆ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಕೆ.ಆರ್. ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ, ಜಿಲ್ಲಾ ಅಧ್ಯಕ್ಷ ಮಹದೇವ ಸ್ವಾಮಿ,ಮುಖಂಡರು ಗಳಾದ ಬಿ.ಎಂ. ರಘು, ಜೋಗಿಮಂಜು, ಶಿವಕುಮಾರ, ಎಂ.ಕೆ. ಶಂಕರ್, ರಮೇಶ್, ಸೋಮಶೇಖರ್, ಭಾನುಪ್ರಕಾಶ್, ಸುರೇಶ್, ಚಿಕ್ಕಮ್ಮ ಬಸವರಾಜ್, ಕಮಲಮ್ಮ, ಎಂ. ರಾಜೇಂದ್ರ, ಪುನೀತ್, ಪಾಪಣ್ಣ, ರಾಕೇಶ್ ಮತ್ತಿತರರು ಹಾಜರಿದ್ದರು.