Sat. Oct 10th, 2026

ಸಾರಿಗೆ ಸಂಸ್ಥೆಗಳ ಇಂಧನ ಬಾಕಿ ಪಾವತಿಗೆ 100 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ

Share this with Friends

ಬೆಂಗಳೂರು: ರಾಜ್ಯದ ನಾಲ್ಕೂ ಸರ್ಕಾರಿ ಸಾರಿಗೆ ನಿಗಮಗಳು ಎದುರಿಸುತ್ತಿದ್ದ ತೀವ್ರ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ನಾಲ್ಕೂ ಸಾರಿಗೆ ನಿಗಮಗಳಲ್ಲಿ ತೈಲ ಕಂಪನಿಗಳಿಗೆ ಪಾವತಿಸಬೇಕಾಗಿದ್ದ ಇಂಧನ ಬಾಕಿ ಮೊತ್ತದ ವಿಲೇವಾರಿಗಾಗಿ ಒಟ್ಟು 100 ಕೋಟಿ ರೂಪಾಯಿ ಹೆಚ್ಚುವರಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ) ರಂಗಪ್ಪ ಕorigar ಅವರು ಸರ್ಕಾರದ ಆದೇಶ ಸಂಖ್ಯೆ: ಟಿಡಿ 41 ಟಿಸಿಬಿ 2026, ದಿನಾಂಕ: 09.10.2026 ರನ್ವಯ ಈ ಆದೇಶವನ್ನು ಪ್ರಕಟಿಸಿದ್ದಾರೆ.

ಈ ಆಡಳಿತಾತ್ಮಕ ಆದೇಶದ ಹಿನ್ನೆಲೆ ಮತ್ತು ನಿಗಮವಾರು ಅನುದಾನ ಹಂಚಿಕೆಯ ಸಮಗ್ರ ವಿವರಗಳು ಕೆಳಗಿನಂತಿವೆ:

1,124 ಕೋಟಿ ರೂ. ತೈಲ ಬಾಕಿ; ನಿತ್ಯ 16 ಲಕ್ಷ ಲೀಟರ್ ಡೀಸೆಲ್ ಬಳಕೆ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ವ್ಯವಸ್ಥಾಪಕ ನಿರ್ದೇಶಕರು ಈ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಸಾರಿಗೆ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟನ್ನು ವಿವರವಾಗಿ ಉಲ್ಲೇಖಿಸಿದ್ದರು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (M/s. HPCL) ಸಂಸ್ಥೆಗೆ ನಾಲ್ಕೂ ನಿಗಮಗಳಿಂದ ಒಟ್ಟು 1,124.91 ಕೋಟಿ ರೂಪಾಯಿಗಳ ಇಂಧನ ಬಾಕಿ ಪಾವತಿಸುವುದು ಬಾಕಿಯಿತ್ತು. ರಾಜ್ಯದಲ್ಲಿ ದಿನವೊಂದಕ್ಕೆ ಅಂದಾಜು 16.26 ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದ್ದು, ಇಂಧನ ವೆಚ್ಚಕ್ಕಾಗಿ ನಿಗಮಗಳಿಗೆ ತಿಂಗಳಿಗೆ ಬರೋಬ್ಬರಿ 488 ಕೋಟಿ ರೂಪಾಯಿ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ತುರ್ತು ಇಂಧನ ಬಾಕಿ ಪಾವತಿಗಾಗಿ ಹೆಚ್ಚುವರಿ ಅನುದಾನ ನೀಡುವಂತೆ ನಿಗಮಗಳು ಸರ್ಕಾರಕ್ಕೆ ಕೋರಿದ್ದವು.

ನಾಲ್ಕು ಸಾರಿಗೆ ನಿಗಮಗಳಿಗೆ ಹಂಚಿಕೆಯಾದ ಮೊತ್ತದ ವಿವರ (ಕೋಟಿ ರೂ.ಗಳಲ್ಲಿ):

ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: FD 163 BRS 2026, ದಿನಾಂಕ: 08.10.2026 ರ ಸಹಮತಿಯನ್ವಯ 2026-27ನೇ ಸಾಲಿನ ಪೂರಕ ಅಂದಾಜುಗಳ 2ನೇ ಕಂತಿನಲ್ಲಿ ಒಟ್ಟು 100 ಕೋಟಿ ರೂಪಾಯಿಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): 62.53 ಕೋಟಿ ರೂ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC): 18.90 ಕೋಟಿ ರೂ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC): 10.61 ಕೋಟಿ ರೂ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): 07.96 ಕೋಟಿ ರೂ.

ಒಟ್ಟು ಬಿಡುಗಡೆ ಮೊತ್ತ: 100.00 ಕೋಟಿ ರೂ. (ನೂರು ಕೋಟಿ ರೂಪಾಯಿಗಳು)

ಅನುದಾನ ಬಳಕೆಗೆ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ಷರತ್ತುಗಳು:

ಉದ್ದೇಶಿತ ಬಳಕೆ: ಬಿಡುಗಡೆ ಮಾಡಲಾಗಿರುವ ಈ ಅನುದಾನವನ್ನು ಯಾವ ಉದ್ದೇಶಕ್ಕಾಗಿ (ಇಂಧನ ಬಾಕಿ ಪಾವತಿ) ಬಿಡುಗಡೆ ಮಾಡಲಾಗಿದೆಯೋ, ಕಡ್ಡಾಯವಾಗಿ ಅದೇ ಉದ್ದೇಶಕ್ಕೆ ಮಾತ್ರ ಬಳಸತಕ್ಕದ್ದು.

ಬಳಕೆ ಪ್ರಮಾಣ ಪತ್ರ: ಅನುದಾನವನ್ನು ವಿನಿಯೋಗಿಸಿದ ನಂತರ ಸಾರಿಗೆ ಸಂಸ್ಥೆಗಳು ಕಡ್ಡಾಯವಾಗಿ ನಿಯಮಾನುಸಾರ ‘ಬಳಕೆ ಪ್ರಮಾಣ ಪತ್ರ’ವನ್ನು (Utilization Certificate) ಸರ್ಕಾರಕ್ಕೆ ಸಲ್ಲಿಸಬೇಕು.

ಎಂಪಿಕ್ ನಮೂನೆ ಸಲ್ಲಿಕೆ: ಬಿಡುಗಡೆ ಮಾಡಲಾದ ಅನುದಾನದ ಸಂಪೂರ್ಣ ವೆಚ್ಚದ ವಿವರಗಳನ್ನು ನಿಗದಿತ ಎಂಪಿಕ್ (MPIC) ನಮೂನೆಯಲ್ಲಿ ಕಡ್ಡಾಯವಾಗಿ ಒದಗಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


Share this with Friends

Related Post