Mon. Dec 23rd, 2024

ನಮ್ಮ ಮೆಟ್ರೋ ರೈಲು ಹಳಿಗೆ ಜಿಗಿದು ಯುವಕ ಆತ್ಮಹತ್ಯೆ

Metro Suicide
Share this with Friends

ಬೆಂಗಳೂರು, ಮಾ. 21: ನಮ್ಮ ಮೆಟ್ರೋ ರೈಲು ಹಳಿಗೆ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುವಾಗ ಯುವಕ ಹಳಿಗೆ ಜಿಗಿದಿದ್ದಾನೆ. ಪರಿಣಾಮ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಯ್ದಿದೆ. ಇದರಿಂದ ಯುವಕನ ದೇಹ ಎರಡು ತುಂಡಾಗಿದೆ.

ಮಟ್ರೋ ರೈಲು ಬರುವ ಹಲವು ನಿಮಿಷಗಳ ಕಾಲ ಮೊದಲೇ ಧ್ರುವ್ ಟಕ್ಕರ್ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದ. ನಂತರ ನಿಲ್ದಾಣದ ಬಲ ಭಾಗದ ತುದಿಗೆ ಹೋಗಿ ನಿಂತಿದ್ದ. ಧ್ರುವ್ ಟಕ್ಕರ್ ಜೊತೆಗೆ ಒರ್ವ ಯುವತಿ ಹಾಗೂ ಮತ್ತೊರ್ವ ಯುವಕ ಇದ್ದ. ಹಾಗೇ ಮೂವರು ಮಾತನಾಡುತ್ತಾ ಮಾತನಾಡುತ್ತಾ ನಿಂತಿದ್ದರು. ನಂತರ ರೈಲು ಬರುವ ಸಮಯದಲ್ಲಿ . ಧ್ರುವ್ ಟ್ರಾಕ್ ಮೇಲೆ ಹಾರಿದ್ದಾನೆ.

ಜೊತೆಗಿದ್ದವರು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರೈಲು ಹತ್ತಿರ ಬಂದಾಗ ಸ್ಥಳದಿಂದ ಓಡಿ ಹೋಗಿದ್ದಾರೆ. ಪರಿಣಾಮ ರೈಲು ಸ್ವಲ್ಪ ದೂರ ಎಳೆದೊಯ್ದಿದ್ದು, ರುಂಡ-ಮುಂಡ ಬೇರೆ-ಬೇರೆಯಾಗಿದೆ. ರೈಲಿನ ಕೆಳಗೆ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.


Share this with Friends

Related Post