Sat. Oct 17th, 2026

ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ: 3ರ ಬದಲು ಇನ್ಮುಂದೆ 2 ಮುಖ್ಯ ಪರೀಕ್ಷೆ ಮಾತ್ರ..!

SSLC Exam
Share this with Friends

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಮಾರ್ಪಾಡು ಮಾಡಿದೆ. ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಮೂರು ವಾರ್ಷಿಕ ಪರೀಕ್ಷೆಗಳ ವ್ಯವಸ್ಥೆಯನ್ನು ಕೈಬಿಟ್ಟು, ಈ ವರ್ಷದಿಂದ ಕೇವಲ ಎರಡು ಪ್ರಮುಖ ಪರೀಕ್ಷೆಗಳನ್ನು ಮಾತ್ರ ನಡೆಸಲು ನಿರ್ಧರಿಸಲಾಗಿದೆ. ಕಳೆದ ಸಾಲಿನಲ್ಲಿ ದಾಖಲಾದ ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪರೀಕ್ಷೆಗಳ ಸಂಖ್ಯೆ ಕಡಿತ: ಇಲಾಖೆ ಸೂಚನೆ

ಪರೀಕ್ಷೆಗಳ ಸಂಖ್ಯೆ ಕಡಿತಗೊಂಡಿರುವುದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಮೊದಲಿನಿಂದಲೇ ಹೆಚ್ಚಿನ ಗಮನ ಹರಿಸಬೇಕಿದೆ. ಕೇವಲ ಎರಡು ಅವಕಾಶಗಳು ಮಾತ್ರ ಲಭ್ಯವಿರುವುದರಿಂದ ಪರೀಕ್ಷಾ ಸಿದ್ಧತೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಇಲಾಖೆ ಎಚ್ಚರಿಸಿದೆ. ಹೊಸ ಮಾದರಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಮತ್ತು ಸೂಕ್ತ ಮಾರ್ಗದರ್ಶನ ನೀಡಲು ಶಿಕ್ಷಕ ವೃಂದಕ್ಕೂ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

2027ರ ದ್ವಿತೀಯ ಪಿಯುಸಿ ಪ್ರಥಮ ಪರೀಕ್ಷೆಯ ತಾತ್ಕಾಲಿಕ ಟೈಮ್‌ಟೇಬಲ್:

ಈ ಮಹತ್ವದ ಬದಲಾವಣೆಗಳ ನಡುವೆಯೇ, 2027ರ ದ್ವಿತೀಯ ಪಿಯುಸಿ ಮೊದಲ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮುಂಬರುವ ಫೆಬ್ರವರಿ 27 ರಿಂದ ಮಾರ್ಚ್ 17 ರವರೆಗೆ ಪರೀಕ್ಷೆಗಳು ಜರುಗಲಿವೆ. ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ಅವಧಿಯಲ್ಲಿ ಪರೀಕ್ಷೆ ನಡೆಯಲಿದ್ದು, ವೇಳಾಪಟ್ಟಿಯ ವಿವರಗಳು ಹೀಗಿವೆ:

ಫೆಬ್ರವರಿ 27: ಕನ್ನಡ / ಅರೇಬಿಕ್

ಮಾರ್ಚ್ 1: ಇಂಗ್ಲಿಷ್

ಮಾರ್ಚ್ 2: ಪ್ರಾದೇಶಿಕ ಭಾಷೆಗಳು

ಮಾರ್ಚ್ 3: ಭೂಗೋಳಶಾಸ್ತ್ರ, ಮನಃಶಾಸ್ತ್ರ

ಮಾರ್ಚ್ 4: ಸಮಾಜಶಾಸ್ತ್ರ, ಭೌತಶಾಸ್ತ್ರ

ಮಾರ್ಚ್ 5: ಲೆಕ್ಕಶಾಸ್ತ್ರ

ಮಾರ್ಚ್ 8: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ

ಮಾರ್ಚ್ 9: ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ

ಮಾರ್ಚ್ 11: ಹಿಂದೂಸ್ತಾನಿ ಸಂಗೀತ ಮತ್ತು ವೃತ್ತಿಪರ ವಿಷಯಗಳು

ಮಾರ್ಚ್ 12: ವ್ಯವಹಾರ ಅಧ್ಯಯನ, ಗಣಿತ

ಮಾರ್ಚ್ 13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ

ಮಾರ್ಚ್ 15: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ

ಮಾರ್ಚ್ 16: ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ

ಮಾರ್ಚ್ 17: ಹಿಂದಿ

(ಸೂಚನೆ: ಮಾರ್ಚ್ 6 ರಂದು ಮಹಾಶಿವರಾತ್ರಿ ಹಬ್ಬ ಹಾಗೂ ಮಾರ್ಚ್ 10 ರಂದು ರಂಜಾನ್ ನಿಮಿತ್ತ ಯಾವುದೇ ಪರೀಕ್ಷೆ ಇರುವುದಿಲ್ಲ)

 


Share this with Friends

Related Post