Fri. Nov 1st, 2024

ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ‘ಹಫ್ತಾ ವಸೂಲಿ’ಯೇ..? : ಅಮಿತ್‌ ಶಾ ಪ್ರಶ್ನೆ

Amit Shah
Share this with Friends

ನವದೆಹಲಿ.ಮಾ.21: ಕಾಂಗ್ರೆಸ್‌ 1600 ಕೋಟಿ ರೂ. ಹಣವನ್ನು ಚುನವಾಣಾ ಬಾಂಡ್‌ನಿಂದ ಪಡೆದುಕೊಂಡಿದೆ. ನಾವು ಇದನ್ನು ಪಾರದರ್ಶಕ ದೇಣಿಗೆ ಎಂದು ಭಾವಿಸುತ್ತೇವೆ. ನಮ್ಮದನ್ನು ಅವರು ಅವರು ಹಫ್ತಾ ವಸೂಲಿ ಎಂದು ಆರೋಪಿಸಿದರೆ ಅವರ ಹಣ ಏನು ಎಂದು ಅಮಿತ್‌ ಶಾ ಪ್ರಶ್ನಿಸಿದರು.

ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ‘ಹಫ್ತಾ ವಸೂಲಿ’ ಮಾಡಿದೆ ಎಂದು ರಾಹುಲ್‌ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? ಅದನ್ನು ಎಲ್ಲಿಂದ ಪಡೆದಿದೆ ಎಂದು ಗೃಹ ಸಚಿವ ಅಮಿತ್‌ ಶಾಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್‌ಗಳು ರಾಜಕೀಯದಲ್ಲಿ ಕಪ್ಪುಹಣವನ್ನು ಬಹುತೇಕ ಅಂತ್ಯಗೊಳಿಸಿತ್ತು. ಇದಕ್ಕಾಗಿಯೇ ರಾಹುಲ್ ಗಾಂಧಿ, ಇಡೀ INDIA ಒಕ್ಕೂಟ ಬಾಂಡ್‌ ವಿರುದ್ಧವಾಗಿತ್ತು ಮತ್ತು ಮತ್ತೊಮ್ಮೆ ರಾಜಕೀಯವನ್ನು ಆಳಲು ಹಳೆಯ ವ್ಯವಸ್ಥೆಯನ್ನು ಅವರು ಬಯಸಿದ್ದರು ಎಂದು ಅಮಿತ್‌ ಶಾ ತಿರುಗೇಟು ನೀಡಿದರು.


Share this with Friends

Related Post