Mon. Dec 23rd, 2024

‘ಯುವ’ ಚಿತ್ರದ ಟ್ರೈಲರ್ ಬಿಡುಗಡೆ

Yuva Trailer
Share this with Friends

ಬೆಂಗಳೂರು.ಮಾ.21:  : ಯುವ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಯುವ ಸಿನಿಮಾದ ಟ್ರೇಲರ್‌ ಅನ್ನು ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿದೆ. ಡಾ. ರಾಜ್​ಕುಮಾರ್ ಅವರ ಮೊಮ್ಮಗ ಯುವ ರಾಜ್​ಕುಮಾರ್ ಅವರ ಸಿನಿಮಾ ಯುವ ಅನೌನ್ಸ್ ಆದಾಗಿನಿಂದಲೂ ಸಖತ್ ಕ್ರೇಜ್ ಸೃಷ್ಟಿಸಿತ್ತು. ಸಿನಿಮಾ ಟೀಸರ್ ರಿಲೀಸ್ ಆದಾಗಲೂ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತ್ತು. ಈಗ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇದು ದೊಡ್ಮನೆ ಫ್ಯಾನ್ಸ್​ಗೆ ಮತ್ತಷ್ಟು ಭರವಸೆ ಮೂಡಿಸುವಂತೆ ಮಾಡಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ರಾಜ್‌ಕುಮಾರ್‌ ಅಭಿನಯದ ‘ಯುವ’ ಚಿತ್ರದ ಟ್ರೈಲರ್ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ.

ಈ ಚಿತ್ರದಲ್ಲಿ ಯುವರಾಜ್ ಕುಮಾರ್ ಸೇರಿದಂತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಮತ್ತು ಕಿಶೋರ್, ತೆರೆ ಹಂಚಿಕೊಂಡಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಆಶಿಕ್ ಸಂಕಲನ, ಮತ್ತು ಶ್ರೀಶ ಕುಡುವಳ್ಳಿ ಛಾಯಾಗ್ರಹಣವಿದೆ. ಅಜನೇಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.ಮೊದಲ ಸಿನಿಮಾದಲ್ಲಿಯೇ ಯುವ ರಾಜ್​ಕುಮಾರ್ ಅವರು ಕನ್ನಡ ಸಿನಿ ಪ್ರೇಕ್ಷಕಲ್ಲಿ ಭರವಸೆ ಮೂಡಿಸುವ ಎಲ್ಲ ಸೂಚನೆಯನ್ನು ಈ ಒಂದು ಟ್ರೈಲರ್ ಮೂಲಕ ಕೊಟ್ಟಿದ್ದಾರೆ.


Share this with Friends

Related Post