Fri. Oct 30th, 2026

ಯಶ್-ರಾಧಿಕಾ ದಂಪತಿ ಪುತ್ರ ಯತರ್ವ್‌ಗೆ ಹುಟ್ಟುಹಬ್ಬದ ಸಡಗರ: ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ ನಟಿ

Share this with Friends

ಬೆಂಗಳೂರು: ಸ್ಯಾಂಡಲ್​ವುಡ್‌ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಪುತ್ರ ಯತರ್ವ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗನ ಹುಟ್ಟುಹಬ್ಬದ ಅಂಗವಾಗಿ ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಗನಿಗೆ ಶುಭ ಹಾರೈಸಿದ್ದಾರೆ.

ಮಗನ ಮುದ್ದಾದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಾಧಿಕಾ ಪಂಡಿತ್, “ನಮ್ಮ ಎಂದೆಂದಿನ ಪುಟಾಣಿಗೆ ಹುಟ್ಟುಹಬ್ಬದ ಶುಭಾಶಯಗಳು, ಯತರ್ವ್! ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ” ಎಂದು ಬರೆದುಕೊಂಡು ಹಾರ್ಟ್ ಹಾಗೂ ದೃಷ್ಟಿ ಬೊಟ್ಟು ಎಮೋಜಿಗಳನ್ನು ಹಾಕಿದ್ದಾರೆ.

ರಾಧಿಕಾ ಪಂಡಿತ್ ಪೋಸ್ಟ್ ಬೆನ್ನಲ್ಲೇ ಅಭಿಮಾನಿಗಳು ಹಾಗೂ ಸ್ಯಾಂಡಲ್​ವುಡ್ ತಾರೆಯರು ಯತರ್ವ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ದಂಪತಿಗೆ ಆಯಿರಾ ಎಂಬ ಮಗಳಿದ್ದು, ಯತರ್ವ್ ಎರಡನೇ ಮಗನಾಗಿದ್ದಾನೆ. ಸದ್ಯ ಯತರ್ವ್ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

 


Share this with Friends

Related Post