Fri. Oct 30th, 2026

2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಒಟ್ಟು 71 ಸಾಧಕರಿಗೆ ಒಲಿದ ಉನ್ನತ ಗೌರವ!

Share this with Friends

ಬೆಂಗಳೂರು: ಕರ್ನಾಟಕ ಸರ್ಕಾರವು 2026ನೇ ಸಾಲಿನ (71ನೇ) ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ರಾಜ್ಯದ ಒಟ್ಟು 71 ಸಾಧಕರಿಗೆ ಈ ಬಾರಿಯ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂದು (ಅಕ್ಟೋಬರ್ 30) ಪುರಸ್ಕೃತರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಾಜಿ ಉಪಮುಖ್ಯಮಂತ್ರಿ ಕಾಗೋಡು ತಿಮ್ಮಪ್ಪ (ಸಮಾಜಸೇವೆ), ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ (ನ್ಯಾಯಾಂಗ) ಹಾಗೂ ಬಾಡಿಬಿಲ್ಡರ್ ಎ.ವಿ. ರವಿ ಅಲಿಯಾಸ್ ಜಿಮ್ ರವಿ (ಕ್ರೀಡೆ) ಸೇರಿದಂತೆ ನಾಡಿನ ಹಲವು ಹಿರಿಯ ಗಣ್ಯರು ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.

ವಿವಿಧ ಕ್ಷೇತ್ರಗಳ ಪ್ರಮುಖ ಪುರಸ್ಕೃತರ ವಿವರ:

ಸಮಾಜಸೇವೆ: ಮಾಜಿ ಡಿಸಿಎಂ ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ), ಬಸವರಾಜು (ಮಂಡ್ಯ), ಡಾ. ಎಸ್.ಎಂ. ಎಲಿ (ದಾವಣಗೆರೆ), ಡಾ. ಜಿ.ಎಸ್. ಚಂದ್ರಶೇಖರ್ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೃಷ್ಣಗೌಡ (ಚಿಕ್ಕಬಳ್ಳಾಪುರ), ಎ.ಸಿ ಭಂಡಾರಿ (ದಕ್ಷಿಣ ಕನ್ನಡ) ಮತ್ತು ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ).

ಚಲನಚಿತ್ರ / ಕಿರುತೆರೆ: ಕೆ. ವೆಂಕಟರಮಣ (ಬಾಬಜೀ), ಅಶೋಕ್, ಮತ್ತು ಕೆ.ಎಸ್. ರವೀಂದ್ರನಾಥ್.

ನ್ಯಾಯಾಂಗ: ಖ್ಯಾತ ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ (ಉಡುಪಿ).

ಕ್ರೀಡೆ: ಎ.ವಿ. ರವಿ (ಜಿಮ್ ರವಿ-ಕೋಲಾರ), ಅಂತರರಾಷ್ಟ್ರೀಯ ಹಾಕಿ ಪಟು ಡಾ. ಎ.ಬಿ. ಸುಬ್ಬಯ್ಯ (ಕೊಡಗು) ಮತ್ತು ಎಂ. ಗಿರೀಶ್ (ಬೆಂಗಳೂರು).

ಸಾಹಿತ್ಯ: ಡಾ. ಇಂದಿರಾ ಹೆಗ್ಗಡೆ, ವೀರಹನುಮಾನ್, ಪ್ರೊ. ನಾರಾಯಣಘಟ್ಟ (ನಾಹೋ), ಮಹೇಶ್ವರಪ್ಪ ಚಟ್ನಳ್ಳಿ, ಡಾ. ಕರಿಗೌಡ ಬೀಚನಹಳ್ಳಿ ಹಾಗೂ ಡಾ. ಸಿದ್ದರಾಮ ಹೊನ್ನಲ್.

ಮಾಧ್ಯಮ: ಡಿ. ಉಮಾಪತಿ (ಚಿತ್ರದುರ್ಗ), ಎಂ.ಪಿ. ಸುಶೀಲ (ಬೆಂಗಳೂರು) ಹಾಗೂ ವಿಶ್ವನಾಥ್ ಸುವರ್ಣ (ಛಾಯಾಚಿತ್ರ-ದಕ್ಷಿಣ ಕನ್ನಡ).

ಶಿಕ್ಷಣ: ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಫಾ| ಜೋಸೆಫ್. ಸಿ. ಸಿ, ಶಾಂತಪ್ಪ.ಪಂ ದಶವಂತ, ಸಂಗೀತಾ ಎನ್‌. ಕಟೀಮನಿ ಮತ್ತು ಪ್ರೊ. ಎನ್.ಎಸ್. ರಂಗರಾಜು.

ಸಂಗೀತ/ನೃತ್ಯ/ಯಕ್ಷಗಾನ: ಡಾ.ಸಿ.ಎ. ಶ್ರೀಧರ್, ಡಾ.ಎ. ನಾರಾಯಣ ಸ್ವಾಮಿ, ವಿ. ಮುರಳಿ (ಸಂಗೀತ), ಡಾ. ಸತ್ಯನಾರಾಯಣ ರಾಜು (ನೃತ್ಯ) ಮತ್ತು ಗೋಪಾಲ ಗಾಣಿಗ (ಯಕ್ಷಗಾನ).

ಹೊರನಾಡು / ಹೊರದೇಶ: ಅಕ್ಕ ಅಮೇರಿಕಾದ ಮಾಜಿ ಅಧ್ಯಕ್ಷ ರಮೇಶ್. ಆರ್ ಗೌಡ ಮತ್ತು ಕೆನಡಾದ ಡಾ. ರಾಜಶೇಖರ ಮೂರ್ತಿ.

ಜಾನಪದ ಕ್ಷೇತ್ರದಲ್ಲಿ 7 ಜನ, ರಂಗಭೂಮಿಯಲ್ಲಿ 6 ಜನ, ಕೃಷಿಯಲ್ಲಿ ಇಬ್ಬರು ಸೇರಿದಂತೆ ಶಿಲ್ಪಕಲೆ, ಚಿತ್ರಕಲೆ, ಪರಿಸರ, ವಿಜ್ಞಾನ ಮತ್ತು ಸಂಕೀರ್ಣ ಕ್ಷೇತ್ರಗಳ ಸಾಧಕರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 


Share this with Friends

Related Post