Mon. Dec 23rd, 2024

ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವಿಸಿದ ಭೂತಾನ್‌

PM Modi becomes receives Bhutan’s highest civilian honour
Share this with Friends

ಥಿಂಪು ಮಾರ್ಚ್ 22: ಭೂತಾನ್‌ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಈ ಮೂಲಕ ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡುವ ಭೂತಾನ್‌ನ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ.

ಭೂತಾನ್‌ನ ದೊರೆ ಜಿಗ್ಮೆ ಖೇಸರ್ ನಾಮ್‌ಗ್ಯೆಲ್ ವಾಂಗ್‌ಚುಕ್ ಅವರನ್ನು ಥಿಂಪುವಿನಲ್ಲಿ ಅವರು ತಮ್ಮ ಎರಡು ದಿನಗಳ ರಾಜ್ಯ ಭೇಟಿಯ ಮೊದಲ ದಿನ ಭೇಟಿಯಲ್ಲಿ ಮೋದಿಯರನ್ನು ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಪ್ರಶಸ್ತಿಯನ್ನು ಇಲ್ಲಿಯವರೆಗೆ ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. 2008 ರಲ್ಲಿ ಹರ್ ಮೆಜೆಸ್ಟಿ ರಾಯಲ್ ಕ್ವೀನ್ ಗ್ರ್ಯಾಂಡ್ ಮದರ್ ಆಶಿ ಕೆಸಾಂಗ್ ಚೋಡೆನ್ ವಾಂಗ್‌ಚುಕ್ ಪ್ರಶಸ್ತಿ ಸ್ವೀಕರಿಸಿದ್ದರು. 2008 ರಲ್ಲಿ ಜೆ ತ್ರಿಜೂರ್ ಟೆಂಜಿನ್ ಡೆಂಡಪ್ (68 ನೇ ಭೂತಾನ್ ನ ಜೆ ಖೆನ್ಪೋ) ಮತ್ತು 2018 ರಲ್ಲಿ ಅವರ ಜೆ ಖೆನ್ಪೋ ಟ್ರುಲ್ಕು ನ್ಗಾವಾಂಗ್ ಜಿಗ್ಮೆ ಚೋಡ್ರಾ ಸ್ವೀಕರಿಸಿದ್ದಾರೆ. ಜೆ ಖೆನ್ಪೋ ಭೂತಾನ್ ನ ಕೇಂದ್ರ ಸನ್ಯಾಸಿಗಳ ಮುಖ್ಯ ಮಠಾಧೀಶರಾಗಿದ್ದಾರೆ.


Share this with Friends

Related Post