ಮೈಸೂರು, ಮಾ.23: ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಯುವಕರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಕಿಚ್ಚು ಹಚ್ಚಲು ಕಾರಣರಾದವರು ಭಗತ್ ಸಿಂಗ್ ಎಂದು ಮಾಜಿ ಸೈನಿಕ ಮಹೇಶ್ ತಿಳಿಸಿದರು.
ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ
ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ ಹುತಾತ್ಮರ ದಿನಾಚರಣೆ, ಜೈ ಹಿಂದ್ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೂಡಾ ಆಗಿರುವ ಮಹೇಶ್ ಅವರು ಮಾತು ಮುಂದುವರಿಸಿ,ದೇಶದ ಉಳಿವಿಗಾಗಿ ಶಾಂತಿಯುತ ವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿ ಯಾಗಿ ಇನ್ನೊಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು.
ಕೆಂಪು ಕೋಟೆಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಟಿಷರೇ ಬಾರತ ಬಿಟ್ಟು ತೊಲಗಿ ,ಇಂಕ್ವೀಲಾಬ್ ಜಿಂದಾ ಬಾದ್ ಎಂಬ ಘೊಷಣೆ ಕೂಗಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದ ಭಗತ್ ಸಿಂಗ್ ಅವರನ್ನು ಮಾರ್ಚ್ 23 ರಂದು ಬಲಿದಾನ ಮಾಡಿದ್ದು, ಕರಾಳ ದಿನ ಎಂದು ಘೊಷಣೆ ಮಾಡಬೇಕೆಂದು ಕೋರಿದರು.
ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ,ಮಳೆ, ಗಾಳಿ, ಚಳಿ, ಬಿಸಿಲನ್ನು ಲೆಕ್ಕಿಸದೆ ದೇಶದ ರಕ್ಷಣೆ ಮಾಡುವ ನಮ್ಮ ಸೈನಿಕರ ಸೇವೆ ಎಷ್ಟು ವರ್ಣಿಸಿದರೂ ಸಾಲದು. ಯುವ ಜನಾಂಗ ದೇಶದ ರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕೆ. ಜೆ ರಮೇಶ್, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸುರೇಶ್,ಅಜಯ್ ಶಾಸ್ತ್ರಿ,ವಿಘ್ನೇಶ್ವರ ಭಟ್, ನಾರಾಯಣ ಶರ್ಮ, ನಾಗಮಣಿ, ಸುದರ್ಶನ್, ಚರಣ್, ಸುಕನ್ಯಾ, ರಾಮ್, ದಯಾನಂದ್, ಮಹಿಳಾ ವಿಜಯ್ ಕುಮಾರ್, ಬೈರತಿ ಲಿಂಗರಾಜು, ರಮೇಶ್, ಮತ್ತಿತರರು ಹಾಜರಿದ್ದರು.