ಮೈಸೂರು, ಮಾ.23: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕಾವೇರಿ ಕ್ರಿಯಾಸಮಿತಿ ಧರಣಿ ಸತ್ಯಾಗ್ರಹ
ಮುಂದುವರಿಸಿದೆ.
ಹೋರಾಟವನ್ನು ಜೀವಂತವಾಗಿಡುವ ಉದ್ದೇಶದಿಂದ ವಾರಕ್ಕೆ ಒಂದು ದಿನ ಕಾವೇರಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಕಾರ್ಯವನ್ನು ಟೌನ್ ಹಾಲ್ ಮುಂಬಾಗ ಹಮ್ಮಿಕೊಂಡಿತು.
ಇಂದು ಸಹ ಸಹಸ್ರಾರು ಜನ ಸಾರ್ವಜನಿಕರಿಂದ ಕಾವೇರಿ ನೀರಿನ ವಿಚಾರವಾಗಿ ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ಜನರಿಗೆ ತಿಳಿ ಹೇಳಿ ಸಹಿಯನ್ನು ಸಂಗ್ರಹಿಸಲಾಯಿತು.
ಈ ವೇಳೆ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜೈಪ್ರಕಾಶ್ ಮಾತನಾಡಿ ತಮಿಳುನಾಡಿನ ಡಿಎಂಕೆ ಸರ್ಕಾರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟನ್ನು ಕರ್ನಾಟಕದಲ್ಲಿ ಕಟ್ಟಲು ಬಿಡುವುದಿಲ್ಲ ಎಂದು ಘೋಷಿಸಿದ್ದು ಇದು ನಿಜಕ್ಕೂ ಖಂಡನೀಯ ಎಂದು ಹೇಳಿದರು.
ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿ ಒಬ್ಬ ಜವಾಬ್ದಾರಿಯತ ಮುಖ್ಯಮಂತ್ರಿ ಕುಡಿಯುವ ನೀರಿಗೆ ತಡೆಯೊಡ್ಡುತ್ತಿರುವುದು ಖಂಡನೀಯ ಇಂತಹ ಕೀಳು ಮಟ್ಟದ ರಾಜಕೀಯಕ್ಕೆ ಇಳಿಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ನಮ್ಮ ಕಾವೇರಿ ಕೊಳ್ಳಗಳಲ್ಲಿ ನೀರು ಬರಿದಾಗಿ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಆದರೂ ತಮಿಳುನಾಡು ಕ್ಯತೆ ತೆಗೆಯುವುದು ಸರಿಯಲ್ಲ, ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್ ಕೆ ರಾಮು, ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಮಂಜುಳಾ, ಪ್ರಭುಶಂಕರ, ವರಕೂಡು ಕೃಷ್ಣೇಗೌಡ, ಶಿವಲಿಂಗಯ್ಯ, ನೇಹಾ,ಹನುಮಂತೇಗೌಡ, ಸಿಂದುವಳ್ಳಿ ಶಿವಕುಮಾರ್, ಸೋಮೇಗೌಡ, ಆಟೋ ಮಹಾದೇವ, ಅಶೋಕ್, ನಾಗರಾಜ್, ಕೃಷ್ಣಪ್ಪ, ಶಿವರಾಮೇಗೌಡ, ಟೈಗರ್ ಬಾಲಾಜಿ, ಬಲರಾಂ, ಪ್ರಭಾಕರ, ಬಾಲು, ರವೀಶ್, ಭಾಗ್ಯಮ್ಮ ಮತ್ತಿತರರು ಪಾಲ್ಗೊಂಡಿದ್ದರು.