ಬೆಂಗಳೂರು,ಮಾ.23: ಕಗ್ಗಂಟಾಗಿದ್ದ ಕೋಲಾರ ಕ್ಷೇತ್ರವನ್ನು ಕೊನೆಗೂ ಬಿಜೆಪಿ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದು ಮೈತ್ರಿ ಧರ್ಮ ಉಳಿಸಿಕೊಂಡಿದೆ.
ಈ ಸಂಬಂಧ ಇಂದು ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಘೋಷಣೆ ಮಾಡಿದರು.
ಕೋಲಾರ ಸೀಟು ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದು, ಈ ಮೂಲಕ ಜೆಡಿಎಸ್‍ಗೆ ನಾವು ಹೇಳಿದಂತೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದರು
ಕೋಲಾರ, ಹಾಸನ, ಮಂಡ್ಯ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ, ನಿಮಗೆ ಕೈ ಮುಗಿದು ಕೇಳಿಕೊಳ್ಳುವೆ,ಪ್ರಧಾನಿ ಮೋದಿಗಾಗಿ ಕೆಲಸ ಮಾಡಿ, ನಿಮ್ಮ ವೈಯಕ್ತಿಕ ಮುನಿಸು ಏನೇ ಇದ್ದರೂ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡರು
ಬಿಜೆಪಿ 25 ಅಭ್ಯರ್ಥಿಗಳ ಆಯ್ಕೆ ಮಾಡಿದೆ. ಜೆಡಿಎಸ್‍ಗೆ ಮೂರು ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆ. ಅಭ್ಯರ್ಥಿ ಯಾರಾಗಾಬೇಕು ಅಂತ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.