Sat. Apr 19th, 2025

ಯದುವೀರ್ ಜನ್ಮದಿನ: ತುಲಾಭಾರ‌ ಮಾಡಿಸಿ ಸಂಭ್ರಮಿಸಿದ ಅಭಿಮಾನಿಗಳು

Share this with Friends

ಮೈಸೂರು, ಮಾ 24: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಯದುವೀರ್‌ ಅವರ ಜನ್ಮದಿನವನ್ನು ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪಿಂಜರ್ ಫೋಲ್‌ನಲ್ಲಿ ಅವರ‌ ಅಭಿಮಾನಿಗಳು ವಿಶೇಷವಾಗಿ ಆಚರಿಸಿ ಶುಭ ಹಾರೈಸಿದರು.

ಮೊದಲು ಗೋವುಗಳಿಗೆ ಪೂಜೆ ಸಲ್ಲಿಸಿ ನಂತರ ಬೆಲ್ಲದ ತುಲಾಭಾರ ಮಾಡುವ‌ ಮೂಲಕ ಯದುವೀರ್ ಅವರ ಹುಟ್ಟು ಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಶಾಸಕ ಶ್ರೀವತ್ಸ ಹಾಗೂ ಮಾಜಿ ಸಚಿವ ಎನ್.ಮಹೇಶ್ ಮತ್ತು ಹಲವು ಬಿಜೆಪಿ ಮುಖಂಡರು ಭಾಗವಹಿಸಿ ಶುಭ ಕೋರಿದರು.


Share this with Friends

Related Post