ಮೈಸೂರು, ಮಾ.26: ಮಾರ್ಚ್ ಎಂಟು ಅಂತರಾಷ್ಟ್ರೀಯ ಮಹಿಳಾದಿನಾಚರಣೆ ದಿನವಾದರೂ ಬಹಳಷ್ಟು ಸಂಘ,ಸಂಸ್ಥೆಗಳು ಈ ತಿಂಗಳು ಪೂರ್ತಿ ಆಚರಿಸುವುದು ಮಾಮೂಲು.
ಮೈಸೂರು ಜಿಲ್ಲೆ,ಕೆ ಆರ್ ನಗರ ತಾಲೂಕಿನ ಅಡಗನ ಹಳ್ಳಿಯಲ್ಲಿ ಅಂತರಾಷ್ಟ್ರೀಯ ದಿನಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.
ಮೈಸೂರಿನ ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆ ಮತ್ತು ದೇಸಿರಿ ನ್ಯಾಚುರಲ್ಸ್ ಸಂಯುಕ್ತವಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳಾ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ದೇಸಿರಿ ನ್ಯಾಚುರಲ್ಸ್ ನ ಮಾಲೀಕರಾದ ಎಚ್. ಆರ್. ಅರುಣ್ ಕುಮಾರ್ ಮಾತನಾಡಿ ಎತ್ತಿನಗಾಣದ ಮೂಲಕ ಎಣ್ಣೆಯನ್ನು ತೆಗೆಯುವ ವಿಧಾನ ಹಾಗೂ ಗಾಣದ ಎಣ್ಣೆಯಿಂದ ಆರೋಗ್ಯದ ಮೇಲೆ ಏನೇನು ಉತ್ತಮ ಪರಿಣಾಮದ ಸಿಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಹೆಚ್.ಸಿ. ಕಾಂತರಾಜು, ಕಾರ್ಯದರ್ಶಿ ಸಿ. ಆರ್.ದಿನೇಶ್, ಖಜಾಂಚಿ ಕೆ.ಟಿ ವಿಷ್ಣು, ವಲಯ ಅಧ್ಯಕ್ಷ ಕೆ. ಆರ್. ಭಾಸ್ಕರಾನಂದ ,ಎಚ್. ಆರ್. ಅರುಣ್ ಕುಮಾರ್ ಉಪಸಿತರಿದ್ದರು.
ಕಾರ್ಯಕ್ರಮದ ವೇಳೆ ಸಂಸ್ಥೆಯ ಎಲ್ಲಾ ಮಹಿಳಾ ಸದಸ್ಯರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.