Mon. Dec 23rd, 2024

ಬೆಂಗಳೂರು, ಶಿವಮೊಗ್ಗ ಹುಬ್ಬಳಿಯಲ್ಲಿ ಎನ್ ಐ‌ ಎ ದಾಳಿ:ಇಬ್ಬರು ವಶ

Share this with Friends

ಬೆಂಗಳೂರು,ಮಾ.27: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಹಲವು ಜಿಲ್ಲೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮನೆ ಮೇಲೆ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಬೆಳ್ಳಂ ಬೆಳಿಗ್ಗೆ ಬೆಂಗಳೂರು, ಶಿವಮೊಗ್ಗ ಹುಬ್ಬಳಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ಹಳೆ ಆರೋಪಿ ಅಬ್ದುಲ್ ಮತೀನ್, ಬಾಂಬರ್ ಮುಸಾವೀರ್ ಹುಸೇನ್, ಬಾಂಬರ್‌ಗೆ ಸಹಾಯ ಮಾಡಿದ ಸಾರ್ಧಾರ್ ನವೀದ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬಾಂಬರ್ ಮುಸಾವೀರ್ ಹುಸೇನ್ ಚೆನ್ನೈನಿಂದ ಬಂದಾಗ, ಮತೀನ್‌, ನವೀದ್‌ ಸಹಾಯ ಮಾಡಿದ್ದರು ಎಂದು ಹೇಳಲಾಗಿದ್ದು, ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎನ್ ಐ ಎ ತಂಡ ಕಲೆಹಾಕುತ್ತಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನ ಗುರುತನ್ನು ಇತ್ತೀಚೆಗಷ್ಟೇ ಎನ್‌ಐಎ ಪತ್ತೆ ಮಾಡಿತು.


Share this with Friends

Related Post