Mon. Dec 23rd, 2024

ಕೋಲಾರ ಕಾಂಗ್ರೆಸ್ ರಾಜಕೀಯದಲ್ಲಿ ಕೋಲಾಹಲ, ಶಾಸಕರ ರಾಜೀನಾಮೆ ಬೆದರಿಕೆ

KH Muniyappa
Share this with Friends

ಕೋಲಾರ, ಮಾ. 27: ಸಚಿವ ಕೆ.ಹೆಚ್​​.ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೇ ಜಿಲ್ಲೆಯ ಐವರು ಶಾಸಕರು ರಾಜಿನಾಮೆ ನೀಡುತ್ತೇವೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್ ಬೆದರಿಕೆ ಹಾಕಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆ.ಹೆಚ್​.ಮುನಿಯಪ್ಪ ಕುಟುಂಬ ಟಿಕೆಟ್ ನೀಡದಂತೆ ಮನವಿ ಮಾಡಿದ್ದೇವೆ. ಒಂದು ವೇಳೆ ಟಿಕೆಟ್​ ನೀಡಿದರೇ ಮಾಲೂರು ಶಾಸಕ ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಕಾಂಗ್ರೆಸ್​​​ ಸದಸ್ಯ ಅನಿಲ್ ಕುಮಾರ್, ನಜೀರ್ ಅಹ್ಮದ್​​ ರಾಜೀನಾಮೆ ನೀಡುತ್ತೇವೆ ಎಂದರು.

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಇನ್ನಷ್ಟು ಕಗ್ಗಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದರೂ, ನಾಯಕರ ನಡುವಿನ ಭಿನ್ನಮತ ಶಮನವಾಗಿಲ್ಲ.


Share this with Friends

Related Post