Tue. Dec 24th, 2024

ಸಚಿವ ಸ್ಥಾನದಿಂದ ತಂಗಡಗಿ ವಜಾ ಗೊಳಿಸಲು ಬಿಜೆಪಿ ಒತ್ತಾಯ

Share this with Friends

ಮೈಸೂರು, ಮಾ.28: ಸಚಿವ ಸ್ಥಾನದಿಂದ ಶಿವರಾಜ ತಂಗಡಗಿ ಅವರನ್ನು ವಜಾ ಗೊಳಿಸಬೇಕೆಂದು ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಒತ್ತಾಯಿಸಿದೆ.

ರಾಜ್ಯ ಸಚಿವ ಶಿವರಾಜ್ ತಂಗಡಗಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅವಹೇಳನಕಾರಿಯಾಗಿ ನಿಂದಿಸಿದ್ದಾರೆಂದು ಆರೋಪಿಸಿ ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಸದಸ್ಯರು ಜಿಲ್ಲಾ ಪಂಚಾಯತ್ ಎದುರು ಪ್ರತಿಭಟಿಸಿದರು.

ಈ‌ ವೇಳೆ ಯುವಮೊರ್ಚಾ ನಗರ ಅಧ್ಯಕ್ಷ ರಾಕೇಶ್ ಗೌಡ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಕರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ ಹಾಗೂ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಈ ಕೂಡಲೇ ತಂಗಡಗಿಯವರನ್ನು ಸಚಿವ ಸಂಪುಟದಿಂದ ಕೈ ಕೊಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ನಗರ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಕೇಬಲ್ ಮಹೇಶ್, ಬಿ. ಎಂ ರಘು, ನಗರ ಉಪಾಧ್ಯಕ್ಷರಾದ ಜೋಗಿಮಂಜು,
ರುದ್ರ ಮೂರ್ತಿ, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಡಿ ಲೋಹಿತ್, ಸಚಿನ್, ಅರ್ಜುನ್, ನವೀನ್ ರಾಜ್, ಮಧು ಸೋಮಶೇಖರ್,ಪುನೀತ್, ಸಂತೋಷ್, ಗಿರೀಶ್, ಶಿವಕುಮಾರ್, ಕೀರ್ತಿ ಧನರಾಜ್, ಕಿರಣ್, ದರ್ಶನ್ ಯದುರಾಜ್, ಅಭಿಲಾಶ್ ಉಮೇಶ್, ಮಧು ಅಕ್ಷಯ್, ನಿಖಿಲ್, ಯೋಗೇಶ್, ನವೀನ್ ಶೆಟ್ಟಿ, ಶಿವಕುಮಾರ್, ವೆಂಕಟೇಶ್ ದಾಸ್, ಪ್ರಭು ,ಮೋಟರಾಜು, ಅಭಿಷೇಕ್, ಚಂದನ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post