Mon. Dec 23rd, 2024

ಯತೀಂದ್ರ ಸಿದ್ದರಾಮಯ್ಯ ವಿರುದ್ದ ಸಿ.ಟಿ.ರವಿ ವಾಗ್ದಾಳಿ

Share this with Friends

ಬೆಂಗಳೂರು,ಮಾ.29: ಅಮಿತ್ ಶಾ ಗೂಂಡಾ, ರೌಡಿ ಎಂದು ಟೀಕಿಸಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ಕೂಡಾ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು ಅಪ್ಪನ ಹೆಸರಿನ ಮೇಲೆ ಅಧಿಕಾರಕ್ಕೆ ಬಂದವರು ಹೀಗೆ ಆಡೋದು ಎಂದು ಟೀಕಿಸಿದರು.

1982ರಲ್ಲೇ ಅಮಿತ್ ಶಾ ಬೂತ್ ಅಧ್ಯಕ್ಷರಾಗಿದ್ದರು, ಆಗ ಯತೀಂದ್ರ ಅವರ‌ ಅಪ್ಪ ಎಂ ಎಲ್ ಎ ಕೂಡ ಆಗಿರಲಿಲ್ಲ, ಅಪ್ಪನ ದುಡ್ಡಿನ ಮೇಲೆ ಶಾಸಕರಾದವರು. ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು ಆಗ ನಮ್ಮ ಮೇಲೂ ಗೂಂಡಾ ಆಕ್ಟ್ ಹಾಕಿದ್ದರು ಹಾಗಾದ್ರೆ ನಾವು ಗೂಂಡಾಗಳಾ ಎಂದು ಪ್ರಶ್ನಿಸಿದರು.

ಯತೀಂದ್ರ ಅವರ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಇಂತವರಿಗೆ ಬಡವರ ಕಷ್ಟ ಕಾಣಿಸುತ್ತಾ, ಚುನಾವಣೆ ಮುಗಿದ ಮೇಲೆ ಇವರೆಲ್ಲಾ ಎಲ್ಲಿರುತ್ತಾರೋ ಎಂದು ಸಿ.ಟಿ ರವಿ ಕುಟುಕಿದರು.


Share this with Friends

Related Post