ಮೈಸೂರು, ಮಾ.29: ಎಲ್ಲ ಕ್ಷೇತ್ರಗಳಲ್ಲಿಯೂ ಒಂದಿಲ್ಲೊಂದು ಸಮಸ್ಯೆ, ಸಂಭ್ರಮವನ್ನು ಎದುರಿಸುತ್ತಲೇ ಮಹಿಳೆ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಚಲನಚಿತ್ರ ನಟಿ ರೂಪ ಅಯ್ಯರ್ ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ವಿಪ್ರ ಸಹಾಯವಾಣಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಪ್ರ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೂಪ ಅಯ್ಯರ್
ಮಾತನಾಡಿದರು.
ಮಹಿಳೆ ನಿರಂತರ ಶ್ರಮ, ಶ್ರದ್ಧೆಯ ಫಲವಾಗಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ ರಂಗದಲ್ಲಿ ಮುನ್ನಡೆದಿದ್ದಾಳೆ. ಹೇಳಿಕೊಳ್ಳಲಾಗದ ಸಮಸ್ಯೆಗಳ ನಡುವೆಯೂ ಯಶಸ್ಸಿನ ಹೆಜ್ಜೆ ಇರಿಸಿದ್ದಾಳೆ, ತನ್ನ ಅರಿವಿನ ಹಂದರ ಇನ್ನಷ್ಟು ವಿಸ್ತಾರಗೊಳಿಸಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ,
ಈ ಎಲ್ಲ ಯಶಸ್ವಿನ ನಡುವೆಯೂ ಗಂಭೀರ ಹೊಣೆಗಾರಿಕೆಯೂ ಆಕೆಯ ಹೆಗಲಿನಲ್ಲಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವ ಹಂತವನ್ನು ನಿಧಾನವಾಗಿ ತಲುಪುತ್ತಿದ್ದಾಳೆ ಎಂಬುದು ಗುರುತಿಸಬೇಕಾದ ಬೆಳವಣಿಗೆ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಮಾತನಾಡಿ ಮಹಿಳೆ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ, ವಿಶ್ವ ಸಾಧಕರಲ್ಲಿ ನಾರಿಯರೇ ಮಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗದ 30 ಸಾಧಕ ವಿಪ್ರ ಮಹಿಳೆಯರಿಗೆ ವಿಪ್ರ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸೈಕಲ್ ಪ್ಯೂರ್ ಅಗರಬತ್ತಿ
ಸುಗಂಧ ದ್ರವ್ಯಗಳ ತಯಾರಕರು ಹಾಗೂ ಮುಖ್ಯಸ್ಥರದ ಜಾನವಿ ಮೂರ್ತಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷೆ ಡಾಕ್ಟರ್ ಲಕ್ಷ್ಮಿ ದೇವಿ, ಕಿರುತರೆ ನಟ ನಾರಾಯಣಸ್ವಾಮಿ, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ, ಅಜಯ್ ಶಾಸ್ತ್ರಿ,ಸಚಿಂದ್ರ, ಚಕ್ರಪಾಣಿ, ನಾಗಶ್ರೀ, ಲತಾ ಬಾಲಕೃಷ್ಣ, ರಂಗನಾಥ್, ಮಹೇಶ್ ಕುಮಾರ್ ,ಮಿರ್ಲೆ ಮನೀಶ್ ಮತ್ತಿತರರು ಉಪಸ್ಥಿತರಿದ್ದರು.