Mon. Dec 23rd, 2024

ಕಡಲ್ಗಳ್ಳರಿಂದ 23 ಪಾಕಿಸ್ತಾನೀಯರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

Indian Navy
Share this with Friends

ನವದೆಹಲಿ, ಮಾ.30: ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಯಲ್ಲಿ ಸಿಲುಕಿದ್ದ 23 ಪಾಕಿಸ್ತಾನೀಯರನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.

ಮಾ. 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ಹಡಗು ‘ಅಲ್-ಕಂಬಾರ್ 786′ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ ಬಗ್ಗೆ ನೌಕಾಪಡೆಗೆ ಮಾಹಿತಿ ದೊರೆತಿತ್ತು.

ಸಾಗರ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಎರಡು ಸತತ 12 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಡಗನ್ನು ರಕ್ಷಣೆ ಮಾಡಿದೆ. ಅದರಲ್ಲಿದ್ದ 23 ಪಾಕಿಸ್ತಾನೀಯರನ್ನೂ ರಕ್ಷಿಸಿದೆ.

12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ತೀವ್ರತರದ ಕಾತರ್ಯಾಚರಣೆಯ ನಂತರ, ಕಡಲ್ಗಳ್ಳರ ವಶದಲ್ಲಿದ್ದ ಇರಾನ್​ ನೌಕೆಯಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಸೂಚಿಸಲಾಯಿತು. ಆ ಬಳಿಕ 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಂತೆ ಹಡಗಿನ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಹೇಳಿದೆ.


Share this with Friends

Related Post