Mon. Dec 23rd, 2024

ಏ.3 ರಂದು ಮುಂದಿನ ನಿರ್ಧಾರ ತಿಳಿಸುವೆ:ಸುಮಲತಾ

Share this with Friends

ಬೆಂಗಳೂರು,ಮಾ.30: ಮಂಡ್ಯದ ಸಂಸದೆ ಸುಮಲತಾ ಬೆಂಬಲಿಗರ ಸಭೆ ನಡೆಸಿದ್ದು, ತಮ್ಮ‌ ಮುಂದಿನ ನಿರ್ಧಾರವನ್ನು ಮಂಡ್ಯದಲ್ಲೇ ಏ.3 ರಂದು ತಿಳಿಸುವುದಾಗಿ ಹೇಳಿದ್ದಾರೆ.

ಜೆ.ಪಿ.ನಗರದ ತಮ್ಮ ನಿವಾಸದಲ್ಲಿಂದು ಬೆಂಬಲಿಗರ ಸಭೆ ನಡೆಸಿದ ಸುಮಲತಾ, ಮೊದಲು ಬೆಂಬಲಿಗರ ಅಭಿಪ್ರಾಯಗಳನ್ನು ಆಲಿಸಿದರು. ಈ ವೇಳೆ ಹಲವು ಬೆಂಬಲಿಗರು ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಬೇಕೆಂದು ಒತ್ತಾಯ ಮಾಡಿದರು.

ನನ್ನ ರಾಜಕೀಯ ಜೀವನ ಆರಂಭವಾಗಿರೋದು ನಿಮ್ಮ ಪ್ರೀತಿಯಿಂದ ನಾನು ಏನೇ ನಿರ್ಧಾರ ತೆಗೆದುಕೊಂಡರೂ, ನಿಮಗೆ ನೋವಾಗುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಒಮ್ಮೆ ಭಾವುಕರಾದ ಸುಮಲತಾ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ನೀವು ಬಂದಿರೋದೇ ನನಗೆ ಆಶೀರ್ವಾದ,ಮಂಡ್ಯ ಜನ ಯಾವುದನ್ನೂ ಲೆಕ್ಕಿಸಿಲ್ಲ, ಅದು ಅಂಬರೀಷ್ ಅವರ ಮೇಲಿನ ಪ್ರೀತಿ ಎಂದು ಹೇಳಿದರು.

ನಾನು ಚುನಾವಣೆಗೆ ಸ್ಪರ್ಧಿಸಿದ ದಿನದಿಂದ ಇಂದಿನವರೆಗೂ ನುಡಿದಂತೆ ನಡೆದಿದ್ದೇನೆ. ಮಂಡ್ಯ ಜಿಲ್ಲೆಯ ಘನತೆಯನ್ನು ಸಂಸತ್ ನಲ್ಲಿ ಎತ್ತಿ ಹಿಡಿದಿದ್ದೇನೆ, ನಾನು ಇದ್ದರೂ ಗೆದ್ದರೂ ಸೋತರೂ ಮಂಡ್ಯದಲ್ಲೇ, ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ,ಇದು ರಾಜಕೀಯ ಸಂಬಂಧವಲ್ಲ, ಅದೊಂದು ಭಾವನಾತ್ಮಕ ಸಂಬಂಧ ಎಂದು ನುಡಿದರು.


Share this with Friends

Related Post