Mon. Dec 23rd, 2024

ಕೃಷ್ಣಾ ನದಿಗೆ ನೀರು ಬಿಡುವಂತೆ ಮನವಿ: ಅಣ್ಣಾಸಾಹೇಬ ಜೊಲ್ಲೆ

Share this with Friends

ಬೆಳಗಾವಿ: (ಚಿಕ್ಕೋಡಿ)
ಜಿಲ್ಲೆಯಲ್ಲಿ ಬರಗಾಲ ಛಾಯೆ ಆವರಿಸಿದ್ದರಿಂದ ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿ ತೀರದ ಗ್ರಾಮಗಳಿಗೆ ಕುಡಿಯುವ ನೀರಿನ ಆಬಾವ ಹೆಚ್ಚಾಗಿದ್ದೆ. ಈ ಪರಿಸ್ಥಿತಿ ಅರಿತುಕೊಂಡ ಚಿಕ್ಕೋಡಿ ಲೋಕಸಭೆ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳದ ದೇವೆಂದ್ರ ಫಡ್ನಾವಿಸ್ ಅವರನ್ನು ಶನಿವಾರ ಭೇಟಿ ಮಾಡಿದ್ದಾರೆ .

ಇತ್ತ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನ- ಜಾನುವಾರು ಸೇರಿದಂತೆ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನದಿಗಳು ಬತ್ತಿಹೊಗಿದ್ದ ಕಾರಣ ತಕ್ಷಣವೇ ನೀರು ಬಿಡುವಂತೆ ಉಪಮುಖ್ಯಮಂತ್ರಿ ದೇವೆಂದ್ರ ಫಡ್ನಾವಿಸ್ ಅವರಿಗೆ ಕೃಷ್ಣಾ‌ನದಿ, ಹಿಡಕಲ್ ಜಲಾಶಯ ಸೇರಿದಂತೆ ವೇದಗಂಗಾ ನದಿಗಳಿಗೆ ನೀರು ಬೀಡುವಂತೆ ಅಣ್ಣಾಸಾಹೇಬ ಜೊಲ್ಲೆ ಮನವಿ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ದೇವೆಂದ್ರ ಫಡ್ನಾವಿಸ್ ತಕ್ಷಣ ನೀರು ಬಿಡುಗಡೆಗೊಳಿಸಲು ಸೂಚಿಸುತ್ತೇನೆ ‌ಎಂದು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ‌.

ಈ ಸಮಯದಲ್ಲಿ ಶಾಸಕರಾದ ಶಶಿಕಲಾ ಜೊಲ್ಲೆ , ದುರ್ಯೋಧ ನ ಐಹೋಳೆ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ ನಿಖಿಲ ಕತ್ತಿ, ರೈತ ಸಂಘದ ಯುವ ಮೋರ್ಚ ಅಧ್ಯಕ್ಷರಾದ ಎಸ್ ಮುದ್ದಕಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share this with Friends

Related Post