Mon. Dec 23rd, 2024

ಸಂಸದೆ ಸುಮಲತಾ ಮನೆಗೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ

Share this with Friends

ಬೆಂಗಳೂರು,ಮಾ.31: ಸಂಸದೆ ಸುಮಲತಾ ಅಂಬರೀಶ್ ಅವರ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭೇಟಿ
ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹೆ‌ಚ್ ಡಿ ಕೆ, ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಏಪ್ರಿಲ್ ನಾಲ್ಕರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ,ಹಾಗಾಗಿ ಸುಮಲತಾ ಅವರ ಸಹಕಾರ ಕೋರಿದ್ದೇನೆ ಎಂದು ಹೇಳಿದರು.

ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ನಡೆಯಿತು,ಅಂಬರೀಷ್ ಅವರ ಮನೆ ನನಗೆ ಹೊಸದಲ್ಲ,ಹಲವಾರು ವರ್ಷಗಳ ಕಾಲ ಜತೆಗೂಡಿ ಬದುಕಿದವರು ನಾವು ಎಂದು ತಿಳಿಸಿದರು.

ನಾನು ಸುಮಲತಾ ಅವರ ಸಹಕಾರ ಕೋರಿದ್ದೇನೆ, ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ, ಅವರಿಗೂ ಹಿತೈಷಿಗಳು ಮತ್ತು ಅಂಬರೀಶ್ ಅವರ ಅಭಿಮಾನಿಗಳು ಇದ್ದಾರೆ. ಶನಿವಾರ ಅವರು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ, ಏಪ್ರಿಲ್ 3 ರಂದು ಮಂಡ್ಯದಲ್ಲಿಯೇ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರೂ ಸುಮಲತಾ ಅವರ ಜತೆ ಚರ್ಚೆ ನಡೆಸಿದ್ದಾರೆ ಎಂದರು ಹೇಳಿದರು.

ಅವರು ತಮ್ಮ ಮುಂದೆ ಯಾವ ಬೇಡಿಕೆಯನ್ನು ಇಟ್ಟಿಲ್ಲ, ಅವರು ಬಿಜೆಪಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಮೃತ ಕೊಟ್ಟವರಿಗೆ ವಿಷಾನ ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಪಾಪ ಡಿ.ಕೆ.ಶಿವಕುಮಾರ್ ವೈರಿಯಲ್ಲ ನನಗೆ, ಅವರು ನನ್ನ ದೊಡ್ಡಮಟ್ಟದ ಹಿತೈಷಿಗಳು. ಅವರಷ್ಟು ಹಿತೈಷಿಗಳು ನನಗೆ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.

ಐದು ವರ್ಷ ಕಾಲ ಸರಕಾರ ನಡೆಸಲಿ ಎಂದು 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ಟೆವು ಎಂದು ಅವರು ಪದೆಪದೇ ಹೇಳುತ್ತಿದ್ದಾರೆ. ಐದು ವರ್ಷ ನಾಮಕಾವಸ್ತೆಯಾಗಿ ನಮಗೆ ಅಧಿಕಾರ ಕೊಟ್ಟರು. ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಬಿಡಲಿಲ್ಲ ತಿರುಗೇಟು ನೀಡಿದರು.

ಯಾರು ಶತ್ರು, ಯಾರು ಹಿತೈಷಿ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಈ‌ ವೇಳೆ‌ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಹಾಜರಿದ್ದರು.


Share this with Friends

Related Post