Mon. Dec 23rd, 2024

ಶ್ರೀ ಶೈಲ ಜಗದ್ಗುರುಗಳ ಏಪ್ರಿಲ್ ಮಾಸದ ಧಾರ್ಮಿಕ ಪ್ರವಾಸ

Share this with Friends

ಶ್ರೀಶೈಲಂ (ಆಂಧ್ರಪ್ರದೇಶ) – ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಏಪ್ರಿಲ್ ತಿಂಗಳ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿಯು ಈ ಕೆಳಗಿನಂತೆ ನಿಗದಿಯಾಗಿದೆ.

  ದಿ.1 ರಿಂದ 12  ವರೆಗೆ ಆಂಧ್ರ ಪ್ರದೇಶದ ಶ್ರೀಶೈಲದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಸಾನಿಧ್ಯ ವಹಿವಸುವರು. ದಿ.13 ಹಾಗೂ14 ರಂದು ಸೊರಬ ತಾಲ್ಲೂಕಿನ ಕ್ಯಾಸನೂರದಲ್ಲಿ ಗುರುಬಸವದೇವರ ಸಂಸ್ಥಾನ ಮಠ, ದ್ವಾರ ಬಾಗಿಲು ಉದ್ಘಾಟನೆ ನೆರವೇರಿಸಿ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಸಮಾರಂಭದ ಸಾನಿಧ್ಯವಹಿಸುವರು. ದಿ. 15 ರಂದು ಧಾರವಾಡದ ವೀರಭದ್ರಗೌಡ ಪಾಟೀಲ ಪರಿವಾರದ ನೂತನ ಗೃಹದಲ್ಲಿ ಪೂಜೆ ನೆರವೇರಿಸುವರು. ಅಂದು ಮದ್ಯಾಹ್ನ ಹುಬ್ಬಳ್ಳಿಯಲ್ಲಿ ಗೋಕುಲ ರಸ್ತೆಯಲ್ಲಿರುವ ಚವ್ಹಾಣ ಗ್ರೀನ್ ಗಾರ್ಡನ್ ದಲ್ಲಿ ಪ್ರಕಾಶ ಬೆಂಡಿಗೇರಿ ಪರಿವಾರದ ಮದುವೆ ಸಮಾರಂಭದಲ್ಲಿ ವಧು ವರರಿಗೆ ಆಶೀರ್ವಾದ ಮಾಡುವರು. ಅಂದು ಸಾಯಂಕಾಲ ಧಾರವಾಡದ ಮ್ಯಾಂಗೋ ಎಸ್ಟೇಟ್ ತಪೋವನ ಹತ್ತಿರ ಎಸ್ ಎಂ ಕೊತಂಬರಿ ಇವರ ಮನೆಯಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು.

ದಿ.16 ಕ್ಕೆ ಹುಕ್ಕೇರಿಯಲ್ಲಿ ಈಶ್ವರಲಿಂಗ ದೇವಸ್ಥಾನ ಉದ್ಘಾಟನೆ ಮಾಡುವರು. ಅಂದು ಸಾಯಂಕಾಲ ಜಮಖಂಡಿ ತಾಲೂಕಿನ ಬಿದರಿಯಲ್ಲಿ ಲಿಂ ಶ್ರೀ ಮ ನಿ ಪ್ರ ಶಿವಲಿಂಗ ಸ್ವಾಮಿಗಳವರ ಪ್ರಥಮ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸುವರು. ದಿ. 19 ರಂದು ಕಾರಟಗಿ ಪಲ್ಲೇದ ಪರಿವಾರದ ಮತ್ತು ಅಂದು ಸಾಯಂಕಾಲ ವಿಜಯಪುರದಲ್ಲಿ ಚಿಕ್ಕರಡ್ಡಿ ಪರಿವಾರದ ಮದುವೆ ಸಮಾರಂಭದಲ್ಲಿ ವಧು ವರರಿಗೆ ಆಶೀರ್ವಾದ ಮಾಡುವರು. ದಿ 20 ರಂದು ಬೀಳಗಿ ತಾಲ್ಲೂಕಿನ ಶಿವಾಪೂರದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ ನೆರವೇರಿಸುವರು.
ದಿ. 20 ರ ಸಂಜೆಯಿಂದ 23 ರವರೆಗೆ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿಯಲ್ಲಿ ಲಿಂ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾದನೆಯ ವಿವಿಧ ಕಾರ್ಯಕ್ರಮಗಳ ಸಾನಿಧ್ಯ ವಹಿಸುವರು. ಇದೇ ಸಂದರ್ಭದಲ್ಲಿ ದಿ 21 ರಂದು ಮುಧೋಳ ತಾಲೂಕಿನ ಜಾಲಿಭೇರಿಯಲ್ಲಿ ಮಲ್ಲಿಕಾರ್ಜುನ ಜಾತ್ರೆ ಸಾನಿಧ್ಯವಹಿಸಿ ತೇರಿಗೆ ಚಾಲನೆ ನೀಡುವರು.

ದಿ.24 ರಂದು ತಾಲೂಕಿನ ತಿಕೋಟಾದಲ್ಲಿ ವೀರಭದ್ರೇಶ್ವರ ಜಾತ್ರಾ ನಿಮಿತ್ಯ ಪ್ರವಚನ ಸಮಾರಂಭದಲ್ಲಿ ಸಾನಿಧ್ಯ ವಹಿಸುವರು. ದಿ 25 ರಂದು ವಿಜಯಪುರ ತಾಲೂಕಿನ ಸವನಳ್ಳಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟನೆ ನೆರವೇರಿಸುವರು. ಅಂದು ಸಂಜೆ ಇಂಡಿ ತಾಲೂಕಿನ ಅರಜನಾಳದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಸಮಾರಂಭದಲ್ಲಿ ಸಾನಿಧ್ಯ ವಹಿಸುವರು. 26 ರಂದು ಇಂಡಿ ತಾಲೂಕಿನ ಗುಂದವಾನ್ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಮಲ್ಲಿಕಾರ್ಜುನ ಲಿಂಗಸ್ಥಾಪನೆ ನೆರವೇರಿಸುವರು. 27 ರಂದು ಔರಂಗಾಬಾದ ದಲ್ಲಿ ಶಿವ ದೇವಾಲಯದ ಲೋಕಾರ್ಪಣೆ ನೆರವೇರಿಸುವರು. 29 ರಂದು ರಬಕವಿ ಬನಹಟ್ಟಿ ತಾಲೂಕಿನ ಆಸಂಗಿಯಲ್ಲಿ ಜೋತಿಬಾ ದೇವಸ್ಥಾನದ ಕಳಸಾರೋಹಣ ನೆರವೇರಿಸುವರು. ಅಂದು ಸಾಯಂಕಾಲ ಸವದತ್ತಿ ತಾಲೂಕಿನ ಏಣಗಿಯಲ್ಲಿ ಬಂಗಾರಜ್ಜನ ಜಾತ್ರಾ ಹಾಗೂ ರಥೋತ್ಸವ ಚಾಲನೆ ನೀಡುವರು. 30 ರಂದು ಬೀಳಗಿ ತಾಲೂಕಿನ ಶಿರಗುಪ್ಪಿಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಉಮಾತಾಯಿ ಮೂರ್ತಿಗೆ ಆಶೀರ್ವಾದ ಮಾಡುವರು. ಎಂದು ಪೀಠದ ವಾರ್ತಾಧಿಕಾರಿ ರಬಕವಿ ಬನಹಟ್ಟಿಯ ಬಸಯ್ಯ ವಸ್ತ್ರದ  ತಿಳಿಸಿದ್ದಾರೆ.


Share this with Friends

Related Post