ಮೈಸೂರು : ರಾಜನಾದರೂ ಯದುವೀರ್ ಬಳಿ ಕಾರಿಲ್ಲ, ಸೈಟಿಲ್ಲ. ಹೌದು ಮೈಸೂರು ಮಹಾರಾಜ ಎನಿಸಿಕೊಂಡರೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಂತ ಕಾರು ಹೊಂದಿಲ್ಲ. ಯಾವುದೇ ಭೂಮಿಕೂಡ ಹೊಂದಿಲ್ಲ .
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯದುವೀರ ಒಡೆಯರ್ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅವರ ಬಳಿ ಸುಮಾರು 5 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಯಾವುದೇ ಕೃಷಿ ಭೂಮಿಯಾಗಲಿ, ಸೈಟ್ ಆಗಲಿ, ಮನೆ ಆಗಲಿ ಇಲ್ಲ ಎಂದು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಯದುವೀರ್ ಒಡೆಯರ್ ಅವರ ಕೈಯಲ್ಲಿ ಸದ್ಯ ಒಂದು ಲಕ್ಷ ರೂ. ನಗದನ್ನು ಹೊಂದಿದ್ದು, ವಿವಿಧ ಬ್ಯಾಂಕ್ ಅಕೌಂಟ್‌ಗಳಲ್ಲಿ 1.36 ಕೋಟಿ ರೂ. ಅನ್ನು ಹೊಂದಿದ್ದಾರೆ. 3.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ.
ಒಟ್ಟು 4.99 ಕೋಟಿ ರೂ. ಚರಾಸ್ತಿಯನ್ನು ಯದುವೀರ್ ಈ ವೇಳೆ ಘೋಷಿಸಿಕೊಂಡಿದ್ದಾರೆ.ಇನ್ನು, ಅವರ ಪತ್ನಿ ತ್ರಿಷಿಕಾ ಬಳಿ 75 ಸಾವಿರ ರೂ. ನಗದು ಇದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹೊಂದಿದ್ದಾರೆ. 90 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿಗಳಿದ್ದು, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 1.04 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ.
ಯದುವೀರ್ ಅವರು ಅವಲಂಭಿತರನ್ನು ಘೋಷಿಸಿದ್ದು, ಅವರ ಹೆಸರಲ್ಲಿ ಒಟ್ಟು 3.63 ಕೋಟಿ ರೂ. ಚರಾಸ್ತಿ ಇದೆ ಎಂದು ಹೇಳಿದ್ದಾರೆ. ಇವರ ಕೈಯಲ್ಲಿ 5 ಸಾವಿರ ರೂ. ನಗದು ಇದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹೊಂದಿದ್ದಾರೆ. ಮ್ಯೂಚುವಲ್ ಫಂಡ್‌ನಲ್ಲಿ 1.49 ಕೋಟಿ ರೂ. ಇದೆ. ಟಾಟಾ ಲೈಫ್ ಇನ್ಸೂರೆನ್ಸ್‌ನಲ್ಲಿ 1.89 ಕೋಟಿ ರೂ. ಹೂಡಿಕೆ ಮಾಡಿದ್ದು, 12 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಹೊಂದಿದ್ದು, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ ಹೊಂದಿದ್ದು, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಹೊಂದಿದ್ದಾರೆ.