Mon. Dec 23rd, 2024

ಚುನಾವಣಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮ:ಮುಖ್ಯಮಂತ್ರಿಗಳ ಕಾರು ಕೂಡಾ ತಪಾಸಣೆ

Share this with Friends

ಮೈಸೂರು,ಏ.2: ಲೋಕಸಭೆ ಚುನಾವಣೆ ಹಿನ್ನಲೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿದ್ದು ಇದಕ್ಕೆ ಸಿಎಂ ಕಾರು ಪರಿಶೀಲಿಸಿದ್ದು ಉದಾಹರಣೆಯಾಗಿದೆ

ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿ ಮಾಡಿದ್ದಾರೆ.ಅಕ್ರಮವಾಗಿ ಹಣ ಸಾಗಿಸುವ ಖದೀಮರ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಯಾವುದೇ ಮುಲಾಜು ನೋಡದೆ ವಾಹನಗಳನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಇದಕ್ಕೆ ಸಿಎಂ ವಾಹನವೂ ಹೊರತಾಗಲಿಲ್ಲ, ಟಿ.ನರಸೀಪುರ ಮಾರ್ಗವಾಗಿ ಮೈಸೂರಿನತ್ತ ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನ ಚಿಕ್ಕಹಳ್ಳಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಣೆ ನಡೆಸಿದ್ದಾರೆ.ಅಲ್ಲದೆ ಸಿಎಂ ಜೊತೆ ಬಂದ ವಾಹನಗಳನ್ನೂ ಸಹ ತಪಾಸಣೆ ಮಾಡಿದ್ದು ಈ ವೇಳೆ ತಪಾಸಣೆಗೆ ಸ್ವತಃ ಸಿಎಂ ಸಹಕರಿಸಿದ್ದಾರೆ.


Share this with Friends

Related Post