Mon. Dec 23rd, 2024

ಪತ್ನಿ,ಇಬ್ಬರು ಮಕ್ಕಳನ್ನು ಕೊಂದು‌ ಎರಡು‌ ದಿನ ಮೃತ ದೇಹಗಳ ಜತೆ ಇದ್ದ ಪಾಪಿ

Share this with Friends

ಲಕನೌ,ಏ.2‌: ಪಾಪಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಮೃತ ದೇಹಗಳೊಂದಿಗೆ ಎರಡು ದಿನಗಳ ಕಾಲ ಕಳೆದ ಭಯಾನಕ ಘಟನೆ ಲಕನೌ ನಲ್ಲಿ ನಡೆದಿದೆ.

ಲಖನೌ‌‌ ನ ಬಿಜ್ನೋರ್ ಪ್ರದೇಶದ ಸರವನ್ ನಗರದಲ್ಲಿ ಈ ಹೇಯ ಘಟನೆ ನಡೆದಿದ್ದು,
ರಾಮ್ ಲಗಾನ್ (32) ತನ್ನ 30 ವರ್ಷದ ಪತ್ನಿ ಜ್ಯೋತಿಯನ್ನು ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾನೆ,ನಂತರ ಪಾಯಲ್ (6) ಮತ್ತು ಆನಂದ್ (3) ಎಂಬ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ

ಪತ್ನಿ ಸದಾ ಮೊಬೈಲ್ ನಲ್ಲಿ ಯಾರೊಂದಿಗೊ ಮಾತನಾಡುತ್ತಿದ್ದನ್ನು ಕಂಡು ರಾಮ್ ಲಗಾನ್ ಜಗಳವಾಡಿದ್ದ.ಆಕೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದು ಮಕ್ಕಳು ನೋಡಿದವೆಂದು ಅವರನ್ನೂ ನಿರ್ದಯವಾಗಿ ಸಾಯಿಸಿದ್ದಾನೆ.

ಕೊಲೆ ಮಾಡಿದ ನಂತರ ಏನು ಮಾಡುವುದೆಂದು ತಿಳಿಯದೆ ಎರಡು ದಿನಗಳ ಕಾಲ ಮೃತ ದೇಹಗಳೊಂದಿಗೆ ಮಲಗಿದ್ದ,
ಬೆಳಿಗ್ಗೆ ಎಂದಿನಂತೆ ಕಚೇರಿಗೆ‌ ವಾಪಸಾಗುತ್ತಿದ್ದ.ಜತೆಗೆ‌ ಏನೂ ಆಗಿಲ್ಲದಂತೆ ಆರಾಮವಾಗಿದ್ದ.

ಎರಡು ದಿನಗಳಿಂದ ಮನೆ ಬಾಗಿಲು ಮುಚ್ಚಿದೆ ಒಳಗಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿ ಮಾಲೀಕರು ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ,ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಉಪ ಆಯುಕ್ತ (ದಕ್ಷಿಣ) ಟಿ.ಎಸ್. ಸಿಂಗ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಮೃತ ದೇಹಗಳನ್ನು ‌ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೋಳಿ ಆಚರಿಸಲು ರಾಮ್ ಲಗಾನ್ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಖಚಿತ ಮಾಹಿತಿ ಆದರಿಸಿ ಪೊಲೀಸರು ಕೊಲೆಗಡುಕನನ್ನು ಬಂಧಿಸಿದ್ದಾರೆ, ವಿಚಾರಣೆ ವೇಳೆ ತಾನೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.


Share this with Friends

Related Post