Mon. Dec 23rd, 2024

ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಜಾಥಾ

Share this with Friends

ಬೆಳಗಾವಿ: (ಕಾಗವಾಡ): ಉಗಾರ ಖುರ್ದ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭೆ ಸಾರ್ವತ್ರಿಕ ಚುನಾವಣೆ 2024 ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನೆರವೇರಿಸಲಾಯಿತು.

ಪಟ್ಟಣದ ಪುರಸಭೆ ಕಾರ್ಯಲಯದಿಂದ ಬೈಕ್ ರ್ಯಾಲಿ ಪ್ರಾರಂಭಿಸಿ ಲಕ್ಷ್ಮೀ ದೇವಸ್ಥಾನ ,ಬಸ್ ನಿಲ್ದಾಣ ,ಖಾಸಗಿ ವಾಹನ ನಿಲ್ದಾಣ, ಬಸವೇಶ್ವರ ವೃತ್ತದಲ್ಲಿ ಮತದಾನದ ಮಹತ್ವ ಸಾರ್ವಜನಿಕರಿಗೆ ತಿಳಿಸಲಾಯಿತು.

ಇನ್ನು‌ಕಳೆದ‌ ವಿಧಾನ ಸಭೆ ಚುನಾವಣೆಯಲ್ಲಿ ಉಗಾರ ಪಟ್ಟಣದಲ್ಲಿ ಕೆಲವು ವಾರ್ಡಗಳಲ್ಲಿ ಮತದಾನ ಮಾಡುವುದಕ್ಕೆ ಹಿಂದೇಟು ಹಾಕಿ ಕಡಿಮೆ ಪ್ರಮಾಣ ಮತದಾನವಾಗಿದ ವಾರ್ಡ ಗಳ ಮನೆಗೆ ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ್ ಹಾಗೂ ಸಿಬ್ಬಂದಿ ವರ್ಗ ನೇತೃತ್ವದ ತಂಡ ಪ್ರತಿಯೊಂದು ಮನೆಗೆ ಭೇಟಿ‌ ನೀಡಿ ಮತದಾನ ನಿಮ್ಮ ಹಕ್ಕು, ಮತದಾನ ಕಡ್ಡಾಯವಾಗಿ ಚಲಾಯಿಸಿ ಮೇ 07 ರಂದು ಮತದಾನ ಪ್ರಜಾಪ್ರಭುತ್ವದ ಹಬ್ಬ ಇದೆ ಎಂದು ಜನರಲ್ಲಿ ಅರಿವು ಮೂಡಿಸಿದರು.
ಈ ಸಮಯದಲ್ಲಿ ಕಂದಾಯ ಅಧಿಕಾರಿ ಶ್ರೀಮತಿ ಎಂ.ಬಿ ಮಾಡಗಿ, ಮ್ಯಾನೇಜರ್ ಉದಯ ಘಟಕಾಂಬಳೆ, ಸಮುದಾಯ ಸಂಘಟಕರಾದ ಕೆ.ಬಿ ಪಾಟೀಲ, ರವಿ ಹಳ್ಳೂರ, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಕನಕನವರ, ಸಂತೋಷ ರೂಪೆ,ಸುಧಾಕರ,ದಯಾನಂದ, ಪ್ರವೀಣ,ಆನಂದ,ಪ್ರಸಾದ ಗುರವ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ,ಸಿಬ್ಬಂದಿ ವರ್ಗ ಭಾಗಿಯಾಗಿದ್ದರು.


Share this with Friends

Related Post