ಬೆಳಗಾವಿ (ಕಾಗವಾಡ ): ಕರ್ನಾಟಕ ಸ್ಟ್ಯಾಂಪುಗಳ ಅಧಿನಿಯಮ 1957 ಎ ಸೆಕ್ಷೆನ್ 45 ಬಿ ರಡಿಯಲ್ಲಿ ಕರ್ನಾಟಕ ರಾಜ್ಯಪತ್ರ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಮಾರ್ಗಸೂಚಿ ಅನುಮೋದನೆ ಮೇರೆಗೆ ಮಾನ್ಯ ಆಡಳಿತಾಧಿಕಾರಿಗಳು ಚಿಕ್ಕೋಡಿ ಇವರ ನಿರ್ಣಯದಂತೆ ಹಾಗೂ ಮಾನ್ಯ ಪೌರಾಡಳಿತ ನಿರ್ದೇಶನದ ಸುತ್ತೋಲೆಯ ಆದೇಶದ ಮೇರೆಗೆ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಮೇಲೆ ಶೇ25% ನ್ನು ಸನ್ 2024-25 ನೇಸಾಲಿನ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ.
ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಕರದಾತರು ತಮ್ಮಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಲ್ಲಿ ತುಂಬಿದರೆ ಆಸ್ತಿ ತೆರಿಗೆ ಶೇಕಡಾ 5% ರಷ್ಟು ರಿಯಾಯಿತಿ ನೀಡಲಾಗಿದ್ದು. ಕರದಾತರು ತಮ್ಮಆಸ್ತಿ ತೆರಿಗೆಯನ್ನು ಮೇ ಮತ್ತು ಜೂನ್ ತಿಂಗಳಲ್ಲಿ ದಂಡ ರಹಿತವಾಗಿ ತುಂಬಬಹುದು, ಕರದಾತರು ತಮ್ಮಆಸ್ತಿ ತೆರಿಗೆಯನ್ನು ಜುಲೈ ತಿಂಗಳಿನಲ್ಲಿ ಪಾವತಿಸಿದರೆ ಶೇ 2 ರಷ್ಟು ದಂಡವನ್ನು ತುಂಬಬೇಕಾಗುತ್ತದೆ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.