ಬೆಳಗಾವಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆ ಚಿಕ್ಕೋಡಿ,ಮಂಗಸೂಳಿ,ಕಾಗವಾಡ, ಮಧಭಾವಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಗಡಿಭಾಗ ಮಹಾರಾಷ್ಟ್ರದಿಂದ ಬರುವ ವ್ಯಕ್ತಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕೆಂದು ಚೆಕ್ ಪೋಸ್ಟ್ನಲ್ಲಿರುವ ಅಧಿಕಾರಿಗಳಿಗೆ ಖಡಕ ಎಚ್ಚರಿಕೆ ನೀಡಿದರು.
ಇನ್ನು ಬೆಳಗಾವಿ ಗಡಿಯ ಬಾಚಿ ಚೆಕ್ ಪೋಸ್ಟನಲ್ಲಿ ಚುನಾವಣಾಧಿಕಾರಿ ಪ್ರಶಾಂತ ದೀಕ್ಷಿತ ಅವರ ತಂಡ 6.65 ಲಕ್ಷ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಅಮೂಲ ವಿದ್ಯಾಧರ ಎಂಬ ವ್ಯಕ್ತಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ 6.65 ಲಕ್ಷ ಹಣ ದಾಖಲೆ ಇಲ್ಲದೆ ಸಾಗಿಸುತ್ತಿದ್ದರು, ಬಾಚಿ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಣ ಪತ್ತೆ ಆಗಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ನೀತಿಸಂಹಿತೆ ಜಾರಿಯಾದ ದಿನದಿಂದ ಒಟ್ಟು 20 ಲಕ್ಷಕ್ಕಿಂತ ಹೆಚ್ಷು ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಹೆಚ್ಚಿನ ಹಣವನ್ನು ಜಪ್ತಿ ಮಾಡುವ ಸಾಧತ್ಯೆ ಇದ್ದು ಅಧಿಕಾರಿಗಳು ಪುಲ್ ಅಲರ್ಟ ಆಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಎಸ್ ಪಿ ಭೀಮಾಶಂಕರ ಗುಳೆದ, ಚಿಕ್ಕೋಡಿ ಉಪವಿಭಾಗಧಿಕಾರಿ ಮೇಹಬೂಬಿ ಸೇರಿದಂತೆ ಅನೇಕ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.