Mon. Dec 23rd, 2024

ಬರ ಪರಿಹಾರ ಸೇರಿದಂತೆ‌‌ ವಿವಿಧ‌ ಬೇಡಿಕೆ ಆಗ್ರಹಿಸಿ ರೈತರ ಪ್ರತಿಭಟನೆ

Share this with Friends

ಬೆಳಗಾವಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆ, ಬಿಸಲಿನ ತಾಪಮಾನ ನಡುವೆ ಜನ ಜಾನುವಾರುಗಳಿಗೆ ಮೇವಿಲ್ಲಾ ,ಬರ ಪರಿಹಾರವೂ ಇಲ್ಲಾ ರೈತರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಧಿಕ್ಕಾರ ಕೂಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಚೆನ್ನಮ್ಮ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಕೊನೆಗೊಳಿಸಿ ಹೋರಾಟ ಪ್ರಾರಂಭಿಸಿದ ರೈತರು, ವಿವಿಧ ಮಠಾಧೀಶರು
ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದರು.

ಬರ ಪರಿಹಾರ,‌ಸಾಲ‌ಮನ್ನಾ, ಘಟಪ್ರಭಾ ನದಿಯಿಂದ ಎಡ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಮುಖ್ಯವಾಗಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಹೋರಾಟ ತ್ರೀವ ಸ್ವರೂಪ ಪಡೆದುಕೊಂಡು ಡಿಸಿ ಕಛೇರಿಗೆ ಹಾಕಲಾದ ಬ್ಯಾರಿಕೇಡಗಳದನ್ನು ರೈತರು ‌ ತಳ್ಳಿ ಡಿಸಿ ಕಛೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂರ್ದಭದಲ್ಲಿ ಪೋಲಿಸ್ ಮತ್ತು ರೈತರ ನಡುವೆ‌ ನೂಕ್ಕಾಟ ಉಂಟಾದ ಸಮಯದಲ್ಲಿ ಡಿಸಿಪಿ‌ ರೋಹನ‌ ಜಗದೀಶ ರೈತರನ್ನು ತಳ್ಳಿದ್ದಾರೆ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರೈತರ ಮನವಿಯನ್ನ ಆಲಿಸಿ. ಇದು ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸ ನಿಮ್ಮ ಮನವಿಯನ್ನ ಸರ್ಕಾರಕ್ಕೆ ಕಳುಹಿಸುತ್ತೇವೆ ಅಂತಾ ಹೇಳಿದರು. ಇದಕ್ಕೆ ಒಪ್ಪದ ರೈತರು ಡಿಸಿ ಅವರ ಮುಂದೆಯೇ ಬೊಬ್ಬೆ ಹೊಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.

ಈಗಾಗಲೇ ಬರ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಮೇವಿನ ವ್ಯವಸ್ಥೆ ಮಾಡುವ ಭರವಸೆ ಸಿಕ್ಕಿದ್ದು, ಆದಷ್ಟು ಬೇಗ ಇದನ್ನ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆಲಸ ಮಾಡಲಿ ಇಲ್ಲದಿದ್ದರೆ ಮುಂದಿನ‌ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ರೈತ ಮುಂಖಡರು ಎಚ್ಚರಿಕೆ ನೀಡಿದ್ದಾರೆ.


Share this with Friends

Related Post