Mon. Dec 23rd, 2024

ಬೋಗಾದಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಣೆ: ಸಿಬ್ಬಂದಿ ಅಮಾನತಿಗೆ ಆದೇಶ

Share this with Friends

ಮೈಸೂರು, ಏ.3: ಚುನಾವಣೆ ಹಿನ್ನಲೆ ಬೋಗಾದಿ ಚೆಕ್ ಪೋಸ್ಟ್ ನಲ್ಲಿ ನಿಯುಕ್ತಿಗೊಳಿಸಲಾದ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ ಕಾರಣ ಅಮಾನತುಪಡಿಸುವಂತೆ ಚುನಾವಣಾಧಿಕಾರಿ
ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

ಅಮಾನತುಗೊಳಿಸುವ ಜತೆಗೆ ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆಯೂ ಮೈಸೂರು ಕೊಡಗು ಲೋಕಸಭಾ ಕ್ಷೇತದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದ್ದಾರೆ.

ರಾತ್ರಿ ಜಿಲ್ಲಾಧಿಕಾರಿಗಳು ಸುಮಾರು 10.30ರ ಲ್ಲಿ ಬೋಗಾದಿ ಚೆಕ್ ಪೋಸ್ಟ್ ಬಳಿ ಪರಿಶೀಲನೆಗೆ ತೆರಳಿದಾಗ ಸಿಬ್ಬಂದಿಗಳು ಸೂಕ್ತವಾಗಿ ಕರ್ತವ್ಯ ನಿರ್ವಹಿಸದಿರುವುದು ಕಂಡುಬಂದಿದೆ.

ಯಾವುದೇ ವಾಹನಗಳನ್ನ ತಡೆದು ತಪಾಸಣೆ ನಡೆಸದಿರುವುದು,ಅಲ್ಲದೆ ಅಲರ್ಟ್ ಆಗಿ ಕೆಲಸ ಮಾಡದಿರುವುದು ಅರಿವಿಗೆ ಬಂದಿದೆ.

ಈ ಹಿನ್ನಲೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮತ್ತು ಪೊಲೀಸರನ್ನು ಅಮಾನತು ಪಡಿಸುವಂತೆ ಎಸ್ ಎಸ್ ಟಿ ತಂಡದ ಹಿರಿಯ ಅಧಿಕಾರಿಗಳಿಗೆ ಡಾ.ರಾಜೇಂದ್ರ ಆದೇಶ ನೀಡಿದ್ದಾರೆ.


Share this with Friends

Related Post