ಮೈಸೂರು, ಏ.3: ಕೇಂದ್ರ ಬರ ಪರಿಹಾರ ವಿಚಾರ ಕುರಿತು ನನ್ನ ಹೇಳಿಕೆ ಸುಳ್ಳಾಗಿದ್ದರೆ ನಾನು ರಾಜೀನಾಮೆ ನೀಡುತ್ತೇನೆ,ಕೇಂದ್ರ ಸಚಿವ ಅಮೀತ್ ಶಾ ರಾಜೀನಾಮೆ ಕೊಡುತ್ತಾರಾ ಎಂದು ಸಿಎಂ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸಚಿವ ಅಮೀತ್ ಶಾ ಅವರಿಗೆ ನೇರಾನೇರ ಸವಾಲು ಹಾಕಿದರು.
ಕೇಂದ್ರ ಬರ ಪರಿಹಾರ ವಿಚಾರ ಕುರಿತು ಸಿದ್ದರಾಮಯ್ಯ ಅಮಿತ್ ಶಾ ಹೇಳಿಕೆಗೆ ಕಿಡಿಕಾರಿದ ಸಿದ್ದು,
ಡಿಸೆಂಬರ್ ತಿಂಗಳಿನಿಂದಲೆ ನಾವು ಹಲವು ವರದಿಕೊಟ್ಟಿದ್ದೇವೆ. ಸುಳ್ಳಾದರೆ ನಾನು ರಾಜೀನಾಮೆ ಕೊಡುತ್ತೇನೆ, ಸುಳ್ಳಾದರೆ ಅಮಿತ್ ಶಾ ಏನು ಮಾಡುತ್ತಾರೆ ಎಂದು ಕಾರವಾಗಿ ಪ್ರಶ್ನಿಸಿದರು.
6 ತಿಂಗಳಿಂದ ವರದಿ ಕೊಡುತ್ತಲೆ ಬಂದಿದ್ದೇವೆ. ಇದನ್ನೆಲ್ಲ ನಾನು ಸಾಬೀತು ಮಾಡುವೆ. ಒಬ್ಬ ಕೇಂದ್ರ ಗೃಹ ಸಚಿವರಾಗಿ ಅದು ಹೇಗೆ ಸುಳ್ಳು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸತ್ಯದ ತಲೆಗೆ ಹೊಡೆದಂತೆ ಅಮೀತ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ ಸಿಎಂ,ಬರ ಪರಿಹಾರ ಸಂಬಂಧ ಈ ಎಲ್ಲಾ ವಿವವರಗಳನ್ನ ಸುಪ್ರೀಂ ಕೋರ್ಟಿಗೆ ಕೊಟ್ಟಿದ್ದೇವೆ. ಎನ್.ಡಿ.ಆರ್.ಎಫ್ ಶಿಫಾರಸ್ಸು ಮಾಡಿರುವುದರಿಂದ ಬರ ಪರಿಹಾರ ಹಣ ಕೊಡಲೇ ಬೇಕಿದೆ ಎಂದು ಹೇಳಿದರು.
ಇದು ಕೇಂದ್ರ ಸರ್ಕಾರದ ಹಣ ಅಲ್ಲ,ರಾಜ್ಯದ ಹಣ. 5 ವರ್ಷಕ್ಕೆ ಎನ್.ಡಿ.ಆರ್ ಎಫ್ ನಲ್ಲಿ ಹಣ ಮೀಸಲಿಟ್ಟಿರುತ್ತಾರೆ.
ಖರ್ಚು ವೆಚ್ಚದ ಬಗ್ಗೆ ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ ಎಂದು ಸಿಎಂ ತಿಳಿಸಿದರು.
ಸುಳ್ಳು ಹೇಳುವ ಇಂತವರಿಗೆ ಮತ ಹಾಕಬಾರದು, ಜನರು ಬುದ್ದಿ ಕಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.