Mon. Dec 23rd, 2024

ನಿವೃತ್ತ ಉಪನ್ಯಾಸಕ ಹೆಚ್ .ಎನ್ .ರಂಗರಾಜು ಅವರಿಗೆ ಸನ್ಮಾನ

Share this with Friends

ಮೈಸೂರು,ಏ.3: ನಿವೃತ್ತ ಉಪನ್ಯಾಸಕ ಮತ್ತು ರಾಮಕೃಷ್ಣ ಆಶ್ರಮದ ನಿಕಟವರ್ತಿ ಹೆಚ್ .ಎನ್ .ರಂಗರಾಜು ರವರಿಗೆ ಸನ್ಮಾನಿಸಲಾಯಿತು.

18 ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ 19 ವರ್ಷ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಹೆಚ್ .ಎನ್ .ರಂಗರಾಜು ಅವರು 15 ವರುಷ NCC ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾರೆ.

ಕೆ.ಆರ್ .ಪೇಟೆ , ಶ್ರೀರಂಗಪಟ್ಟಣ ಮತ್ತು ಬಲ್ಲೇನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗಳಲ್ಲಿ ಒಟ್ಟು 37 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಮಾರ್ಚ್ 31 ರಂದು ಹೆಚ್ .ಎನ್ .ರಂಗರಾಜು ನಿವೃತ್ತರಾಗಿದ್ದಾರೆ.

ನಿವೃತ್ತರಾದ ಹೆಚ್ .ಎನ್ .ರಂಗರಾಜು ಅವರನ್ನು ಮೈಸೂರಿನ
ಟಿ.ಕೆ.ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ನಂಜನಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ .ದಿನೇಶ್ ರವರು ಸನ್ಮಾನಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಂಶುಪಾಲ ಜೆ.ಜಿ ರಾಜೇಗೌಡ ಕೂಡಾ ಹಾಜರಿದ್ದರು.


Share this with Friends

Related Post